Advertisement
ನಂ.2 ಆಟಗಾರ್ತಿ ನವೋಮಿ ಒಸಾಕಾ ಅವರಿಗೂ ಸೋಲಿನ ಆಘಾತ ಎದುರಾಗಿದೆ. ಸಿಮೋನಾ ಹಾಲೆಪ್ ಸ್ನಾಯು ಸೆಳೆತದಿಂದಾಗಿ ದ್ವಿತೀಯ ಸುತ್ತಿನ ಪಂದ್ಯದ ವೇಳೆ ಅರ್ಧದಲ್ಲೇ ಹಿಂದೆ ಸರಿದರು.
23 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಒಡತಿ ಸೆರೆನಾ ವಿಲಿಯಮ್ಸ್ ಅವರನ್ನು ಪೊಡೊರೋಸ್ಕಾ 7-6 (8-6), 7-5 ಅಂತರದಿಂದ ಪರಾಭವ ಗೊಳಿಸಿದರು.ಮೂರು ತಿಂಗಳ ಬಳಿಕ ಸೆರೆನಾ ಆಡಲಿಳಿದ ಮೊದಲ ಟೂರ್ನಿ ಇದಾಗಿತ್ತು. ಸಾವಿರ ಪಂದ್ಯಗಳಲ್ಲಿ ಅವರು ಅನುಭವಿಸಿದ 149ನೇ ಸೋಲು ಇದಾಗಿದೆ. ಇದನ್ನೂ ಓದಿ :ಕೋವಿಡ್ ವ್ಯಾಕ್ಸಿನ್ ಪಡೆದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್
Related Articles
Advertisement
ನವೋಮಿ ಒಸಾಕಾ ಅವರನ್ನು ಅಮೆರಿಕದ ಜೆಸ್ಸಿಕಾ ಪೆಗ್ಯುಲಾ 7-6 (2), 6-2 ಅಂತರದಿಂದ ಹಿಮ್ಮೆಟ್ಟಿಸಿದರು. ಕಳೆದ ಮ್ಯಾಡ್ರಿಡ್ ಓಪನ್ ಪಂದ್ಯಾವಳಿಯಲ್ಲೂ ಒಸಾಕಾ ದ್ವಿತೀಯ ಸುತ್ತಿನಲ್ಲೇ ಸೋಲನುಭವಿಸಿದ್ದರು.