Advertisement

ಗಂಡು ಮಗು ದತ್ತು ಪಡೆದ ಇಟಲಿ ದಂಪತಿ

07:41 PM Apr 04, 2021 | Team Udayavani |

ಗದಗ: ಪರೋಪಕಾರದಿಂದ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ. ಈ ಹಿನ್ನೆಲೆಯಲ್ಲಿ ಪರಿತ್ಯಕ್ತ ಮಕ್ಕಳನ್ನು ಸೇವಾ ಭಾರತಿ ಟ್ರಸ್ಟ್‌ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪೋಷಣೆ ಮಾಡುವ ಮೂಲಕ ಪರೋಪಕಾರ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದು ಜ|ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

Advertisement

ಶನಿವಾರ ಬೆಟಗೇರಿಯ ಸೇವಾ ಭಾರತಿ ಟ್ರಸ್ಟ್‌ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪೋಷಣೆಯಾದ ಗಂಡು ಮಗುವನ್ನು ಮಕ್ಕಳಿಲ್ಲದ ಇಟಲಿ ದೇಶದ ದಂಪತಿಗೆ ದತ್ತು ಪೋಷಕತ್ವದಡಿ ಹಸ್ತಾಂತರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮನುಷ್ಯ ಬದುಕಿನುದ್ದಕ್ಕೂ ಪರೋಪಕಾರ ಕಾರ್ಯಗಳನ್ನು ಮಾಡಿದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದರು.

ಮುಖ್ಯ ಅತಿಥಿ ಡಾ|ಎಂ.ಡಿ.ಸಾಮುದ್ರಿ ಮಾತನಾಡಿ, ವೈದ್ಯಕೀಯ ಕ್ಷೇತ್ರಕ್ಕೆ ದಂಪತಿ ಬಂಜೆತನ ಒಂದು ರೀತಿಯಲ್ಲಿ ಸವಾಲಾಗಿ ಪರಿಣಮಿಸಿದೆ. ಇಂತಹ ದಂಪತಿ ಮಕ್ಕಳನ್ನು ಕಾನೂನಿನ ಚೌಕಟ್ಟಿನಲ್ಲಿ ದತ್ತು ಪಡೆಯುವುದೊಂದೇ ಸುಲಭ ಮಾರ್ಗ. ದತ್ತು ಮಕ್ಕಳನ್ನು ಪೋಷಣೆ ಮಾಡಿ, ಜೀವನದಲ್ಲಿ ಸಂತೃಪ್ತಿ ಕಾಣಬೇಕೆಂದು ಸಲಹೆ ನೀಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಡಿಗೇರ ಮಾತನಾಡಿ, ಸೇವಾಭಾರತಿ ಟ್ರಸ್ಟ್‌ ವಿಕಲಚೇತನರನ್ನು ಹಾಗೂ ಪರಿತ್ಯಕ್ತ ಮಕ್ಕಳನ್ನು ಪೋಷಿಸುವ ಮೂಲಕ ಸಮಾಜಮುಖೀಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಇತರೆ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಧಿಕಾರಿ ಅವಿನಾಶ ಗೋಟಖೀಂಡಿ, ಸುಮಯ್‌ ಸಾಮುದ್ರಿ, ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ, ಕಾರ್ಯದರ್ಶಿ ಸುಭಾಸ ಬಬಲಾದಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next