Advertisement

ನಾಳೆ ಚಾಲನೆಗೊಳ್ಳಲಿದೆ ರಾಯಚೂರಿನ ಮೊದಲ ನೀರಾ ಮಳಿಗೆ

01:45 PM Feb 07, 2021 | Team Udayavani |

ರಾಯಚೂರು: ನಗರದ ಕೃಷಿ ವಿವಿ ಎದುರು ಮೊದಲ ನೀರಾ ಮಾರಾಟ ಮಳಿಗೆಗೆ ಫೆ.8ರಂದು ಚಾಲನೆ ನೀಡಲಾಗುವುದು ಎಂದು ಮಲೆನಾಡು ನಟ್ಸ್ ಆಂಡ್ ಸ್ಪೈಸಸ್ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಮನೋಹರ ಮಸ್ಕಿ ತಿಳಿಸಿದ್ದಾರೆ.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ನೀರಾ ಫಾರ್ ಲೈಫ್ ಮಳಿಗೆಯನ್ನು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಉದ್ಘಾಟಿಸುವರು. ವೈಜ್ಞಾನಿಕ ಸಂಶೋಧನೆಗಳ ನಂತರ ನೀರಾ ಪ್ರಕೃತಿ ದತ್ತವಾದ ಸಹಜ ಪೇಯ ಎಂಬುದು ದೃಡಪಟ್ಟಿದೆ. ಇದನ್ನು ಸೇವಿಸುವುದರಿಂದ ಹಲವು ರೋಗಗಳು ವಾಸಿಯಾಗಲಿವೆ.  ನೀರಾ ಔಷಧದ ಪರ್ಯಾಯ ಪದ ಎಂದು ವಿವರಿಸಿದರು.

ಕಲ್ಪರಸ, ಕಲ್ಪಾಮೃತ ಎಂಬ ಹೆಸರಿನಲ್ಲಿ ಕರೆಯುವ ಈ ಆರೋಗ್ಯಕರ ಪೇಯವನ್ನು ನಿಷೇಧಿಸಲ್ಪಟ್ಟಿತ್ತು. ಆಯುರ್ವೇದದಲ್ಲಿ 400 ವರ್ಷಗಳಿಗಿಂತಲೂ ಹೆಚ್ಚು ಕಾಲ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆಯಾಗಿದ್ದ ನೀರಾವನ್ನು ನಿಷೇಧಿಸಲಾಗಿತ್ತು. ನಿಷೇಧದ ತೆರವಿಗೆ ರೈತ ಹೋರಾಟ ಮತ್ತು ಚಳುವಳಿಯನ್ನು ಮಾಡಲಾಯಿತು. 2001ರಲ್ಲಿ ಈ ಚಳವಳಿಯ ಭಾಗವಾಗಿ ಇಬ್ಬರು ರೈತರು ಸಾವಿಗೀಡಾಗಿದ್ದರು.  ನಂತರದ ದಿನಗಳಲ್ಲಿ ವೈಜ್ಞಾನಿಕ ಸಂಶೋಧನೆ ಮಾಡಲ್ಪಟ್ಟು ನೀರಾ ಎಂಬ ಪೇಯ ಪೌಷ್ಟಿಕಾಂಶಯುಕ್ತ ಗುಣಲಕ್ಷಣವುಳ್ಳದ್ದು, ಇದರಲ್ಲಿ ಆಲ್ಕೋಹಾಲ್ ಪ್ರಮಾಣ ಶೂನ್ಯವಾಗಿದ್ದು, ನೀರಾದ ಬಹುತೇಕ ಮತ್ತು ರಾಸಾಯನಿಕ ಗುಣಲಕ್ಷಣಗಳು ಆರೋಗ್ಯಕ್ಕೆ ಪೂರಕವಾಗಿದೆ ಎಂದು ಸಾಬೀತಾಗಿದೆ . ಇದರಿಂದಾಗಿ 2011ರಲ್ಲಿ ನೀರಾ ನಿಷೇಧ ತೆರವು ಮಾಡಿ ಜನರ ಬಳಕೆಗೆ ಅಧಿಕೃತಗೊಳಿಸಲಾಯಿತು ಎಂದರು.

ಇದನ್ನೂ ಓದಿ:ಸಾರ್ವಜನಿಕ ಆರೋಗ್ಯ ಕ್ಷೇತ್ರ ವಿಶ್ವಮಟ್ಟದಲ್ಲಿ ಸುಧಾರಿಸಬೇಕು: ರಾಷ್ಟ್ರಪತಿ ರಾಮನಾಥ್ ಕೋವಿಂದ್

ನೀರಾ ಉತ್ಪಾದನೆ ಮತ್ತು ಸಂಸ್ಕರಣ ಘಟಕಕ್ಕೆ ಅನುಮತಿ ಪಡೆದಿದ್ದು, ಪ್ರತಿದಿನ 4 ಸಾವಿರ ಲೀ. ಸಾಮರ್ಥ್ಯದ ಸಂಸ್ಕರಣಾ ಘಟಕವನ್ನು ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದಲ್ಲಿ ಸ್ಥಾಪಿಸಲಾಗಿದೆ. 40ರಷ್ಟು ತಾಪಮಾನವಿದ್ದಲ್ಲಿ ನೀರಾ ಹೆಂಡವಾಗಿ ಪರಿವರ್ತನೆಯಾಗುವುದರಿಂದ ಅದನ್ನು ಸಂಸ್ಕರಿಸಲು ಅಬಕಾರಿ ಇಲಾಖೆ ಅನುಮತಿಯೊಂದಿಗೆ ರೈತ ಉತ್ಪಾದಕ ಕಂಪನಿಗಳಿಗೆ ಅವಕಾಶವಿದೆ. ತೆಂಗು ಬೆಳೆಗಾರ ಹಾಗೂ ಕೆಲಸಗಾರರ ಮೊಗದಲ್ಲಿ ಮಂದಹಾಸ ಮೂಡಲು ನೀರಾ ಮಾರಾಟಕ್ಕೆ ಅನುಮತಿ ಕೊಟ್ಟಿರುವುದು ಕಾರಣ. ನೀರಾವನ್ನು ಪ್ರತಿಯೊಬ್ಬರು ಸೇವಿಸಬಹುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next