Advertisement

ನೇರ ಯುದ್ಧ ಗೆದ್ದ ನಾವು ಪರೋಕ್ಷ ಯುದ್ಧವನ್ನೂ ಗೆಲ್ಲುತ್ತೇವೆ: ರಾಜನಾಥ್ ಸಿಂಗ್

03:56 PM Dec 12, 2021 | Team Udayavani |

ನವದೆಹಲಿ: 1971 ರಲ್ಲಿ ನೇರ ಯುದ್ಧವನ್ನು ಗೆದ್ದ ಭಾರತವು, ಪಾಕಿಸ್ಥಾನ ಪ್ರೇರಿತ ಭಯೋತ್ಪಾದನೆಯ ವಿರುದ್ಧ ನಡೆಯುತ್ತಿರುವ ಪರೋಕ್ಷ ಯುದ್ಧವನ್ನೂ ಗೆಲ್ಲುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ.

Advertisement

1971ರ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಗಳಿಸಿದ ವಿಜಯದ ಸ್ಮರಣಾರ್ಥ ‘ಸ್ವರ್ಣಿಮ್ ವಿಜಯ್ ಪರ್ವ್’ (ಸುವರ್ಣ ಮಹೋತ್ಸವ ಆಚರಣೆ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, “ಪಾಕಿಸ್ತಾನವು ಭಯೋತ್ಪಾದನೆ ಮತ್ತು ಇತರ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ಭಾರತವನ್ನು ಒಡೆಯಲು ಬಯಸುತ್ತಿದೆ” ಎಂದರು.

1971 ರ ಯುದ್ಧವು ಭಾರತದ ವಿಭಜನೆಯನ್ನು ತೋರಿಸಿತು, ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯದ ಸಮಯದಲ್ಲಿ ಧರ್ಮದ ಹೆಸರಿನಲ್ಲಿ “ಐತಿಹಾಸಿಕ ತಪ್ಪು” ನಡೆಯಿತು ಎಂದು ಅವರು ಹೇಳಿದರು.

1971 ರ ಯುದ್ಧದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕ್ ನ ಎಲ್ಲಾ ಯೋಜನೆಗಳನ್ನು ಸೋಲಿಸಿದವು. ಪ್ರಸ್ತುತ ಅವರು ಭಯೋತ್ಪಾದನೆಯ ಬೆದರಿಕೆಯನ್ನು ಬೇರುಸಹಿತ ಕಿತ್ತುಹಾಕಲು ಕೆಲಸ ಮಾಡುತ್ತಿದ್ದಾರೆ ಎಂದರು.

“ನಾವು ನೇರ ಯುದ್ಧವನ್ನು ಗೆದ್ದಿದ್ದೇವೆ ಮತ್ತು ನಾವು ಪರೋಕ್ಷ ಯುದ್ಧವನ್ನೂ ಗೆಲ್ಲುತ್ತೇವೆ ಎಂದು ನಾನು ಸಂಪೂರ್ಣವಾಗಿ ಭರವಸೆ ನೀಡಬಲ್ಲೆ” ಎಂದರು.

Advertisement

ಈ ಸ್ವರ್ಣಿಮ್ ವಿಜಯ್ ಪರ್ವ್ ಅನ್ನು ಭಾರತ ಸರಕಾರವು ಹೆಚ್ಚು ವೈಭವಯುತವಾಗಿ ನಡೆಸಲು ಯೋಜಿಸಿತ್ತು, ಆದರೆ ದೇಶದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 ಸಶಸ್ತ್ರ ಪಡೆಗಳ ಸಿಬ್ಬಂದಿಗಳ ಅಕಾಲಿಕ ಮರಣದಿಂದಾಗಿ, ಈ ಕಾರ್ಯಕ್ರಮವನ್ನು ಸರಳವಾಗಿ ನಡೆಸಲು ನಿರ್ಧರಿಸಲಾಯಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next