Advertisement

ಇದು ಮಂಗಳೂರು ನಗರದ ಸ್ಮಾರಕ ಕಟ್ಟಡ: ಬಿಷಪ್‌

03:00 PM Mar 13, 2017 | Team Udayavani |

ಮಂಗಳೂರು: ಕಂಕನಾಡಿಯ ಫಾದರ್‌ ಮುಲ್ಲರ್‌ ಚಾರಿಟೆಬಲ್‌ ಸಂಸ್ಥೆ ಸುಮಾರು 50 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ದೃಶ್ಯ- ಶ್ರಾವ್ಯ ಮಾಧ್ಯಮ ವ್ಯವಸ್ಥೆ ಹೊಂದಿರುವ ನೂತನ ಸಭಾಂಗಣ “ಫಾದರ್‌ ಮುಲ್ಲರ್‌ ಕನ್ವೆನ್ಶನ್‌ ಸೆಂಟರ್‌’ ರವಿವಾರ ಲೋಕಾರ್ಪಣೆಗೊಂಡಿತು. 

Advertisement

ಬೆಂಗಳೂರಿನ ಆರ್ಚ್‌ ಬಿಷಪ್‌ ಹಾಗೂ ಫಾದರ್‌ ಮುಲ್ಲರ್‌ ಸಂಸ್ಥೆ ಮಾಜಿ ನಿರ್ದೇಶಕ ರೆ| ಡಾ| ಬರ್ನಾರ್ಡ್‌ ಮೊರಾಸ್‌ ಉದ್ಘಾಟನೆ ನೆರವೇರಿಸಿದರು. ಮಂಗಳೂರು ಬಿಷಪ್‌ ಹಾಗೂ ಫಾದರ್‌ ಮುಲ್ಲರ್‌ ಚಾರಿಟೆಬಲ್‌ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ ಆಶೀರ್ವಚನ ಹಾಗೂ ಪ್ರಾರ್ಥನಾ ಪ್ರಕ್ರಿಯೆ ನಡೆಸಿದರು. 

ಮುಖ್ಯ ಅತಿಥಿಗಳಾಗಿ ಧರ್ಮಪ್ರಾಂತದ ಪ್ರಧಾನ ಗುರು ಮೊ| ಡೆನಿಸ್‌ ಮೊರಸ್‌ ಪ್ರಭು, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಶಾಸಕ ಜೆ.ಆರ್‌. ಲೋಬೋ, ಬ್ಲೋಸಂ ಫೆರ್ನಾಂಡಿಸ್‌ ಉಪಸ್ಥಿತರಿದ್ದರು. 

ಫಾದರ್‌ ಮುಲ್ಲರ್‌ ಸಂಸ್ಥೆಗಳ ನಿರ್ದೇಶಕ ಫಾ| ಪ್ಯಾಟ್ರಿಕ್‌ ರೊಡ್ರಿಗಸ್‌ ಸ್ವಾಗತಿಸಿ ಪ್ರಸ್ತಾಧಿವನೆಧಿಗೈದರು. ಫಾದರ್‌ ಮುಲ್ಲರ್‌ ಆಸ್ಪತ್ರೆ ಆಡಳಿತಾಧಿಧಿಕಾರಿ ಫಾ| ರಿಚಾರ್ಡ್‌ ಕುವೆಲ್ಲೊ ವಂದಿಸಿಧಿದರು. ಫಾ| ರವಿ ರುಡಾಲ್ಫ್ ಡೆ’ಸಾ, ಫಾ| ಅಜಿತ್‌ ಮಿನೇಜಸ್‌, ಫಾ| ಜಾರ್ಜ್‌ ಡಿ’ಸೋಜಾ, ಫಾ| ಫೆಲಿಕ್ಸ್‌ ಮೊಂತೇರೊ, ಫಾ| ಮೆಲ್ವಿನ್‌ ಡಿ’ಸೋಜಾ, ಫಾ| ವಿನ್ಸೆಂಟ್‌ ಡಿ’ಸೋಜಾ, ಫಾ| ಸಿಲ್ವೆಸ್ಟರ್‌ ವಿನ್ಸೆಂಟ್‌ ಲೋಬೊ, ಫಾ| ರೋಶನ್‌ ಕ್ರಾಸ್ತಾ, ಫಾ| ಪೀಟರ್‌ ನೊರೋನ್ಹಾ, ಸಿ| ಜಾನೆಟ್‌ ಡಿ’ಸೋಜಾ ಆಶೀರ್ವಚನ ಕಾರ್ಯಕ್ರಮಧಿದಲ್ಲಿ ಸಹಕರಿಸಿದರು. 

ಮಂಗಳೂರಿನ ಅಭಿವೃದ್ಧಿಗೆ ಕೊಡುಗೆ
ಈ ಸಭಾಂಗಣ ಮಂಗಳೂರಿನ ಅಭಿವೃದ್ಧಿಗೆ ಒಂದು ಕೊಡುಗೆಯಾಗಿದೆ. ನಗರಕ್ಕೆ ಸಕಲ ಮೂಲ ಸೌಕರ್ಯ ಹೊಂದಿರುವ ಅಂತಾಧಿರಾಷ್ಟ್ರೀಯ ಗುಣಮಟ್ಟದ ಸಭಾಗೃಹದ ಆವಶ್ಯಕತೆ ಇತ್ತು. ಅದನ್ನು ಫಾ| ಮುಲ್ಲರ್‌ ಸಂಸ್ಥೆ ಒದಗಿಸಿದ್ದು, ಈ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಶಾಸಕ ಜೆ.ಆರ್‌. ಲೋಬೊ ಹೇಳಿದರು. 

Advertisement

ಡೀಮ್ಡ್ ವಿ.ವಿ. ಆಗಿ ಬೆಳೆಯಲಿ
ಮಂಗಳೂರು ಧರ್ಮಪ್ರಾಂತ ಶಿಕ್ಷಣ ಮತ್ತು ಆರೋಗ್ಯಕ್ಕೆ ಅಪಾರ ಕೊಡುಗೆ ನೀಡಿದೆ. ಫಾ| ಮುಲ್ಲರ್‌ ಮೆಡಿಕಲ್‌ ಮತ್ತು ಹೋಮಿಯೋಪತಿ ಕಾಲೇಜು, ಸೈಂಟ್‌ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜು ಮತ್ತು 400ರಷ್ಟು ಶಾಲೆಗಳನ್ನು ನಡೆಸುತ್ತಿದೆ. ಫಾ| ಮುಲ್ಲರ್‌ ಸಂಸ್ಥೆ ಡೀಮ್ಡ್ ವಿ.ವಿ. ಆಗಿ ಬೆಳಯಲು ಅರ್ಹತೆ ಹೊಂದಿದ್ದು, ಈ ದಿಶೆಯಲ್ಲಿ ಸರಕಾರದ ವತಿಯಿಂದ ಸಂಪೂರ್ಣ ನೆರವು ನೀಡಲಾಗುವುದು ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಹೇಳಿದರು. 

“ಚಿಕಿತ್ಸೆ ನೀಡಿ ಸಂತೈಸುವುದು’ (ಹೀಲ್‌ ಆ್ಯಂಡ್‌ ಕಂಫರ್ಟ್‌) ಫಾ| ಮುಲ್ಲರ್‌ ಸಂಸ್ಥೆ ಧ್ಯೇಯ. ಕಳೆದ 137 ವರ್ಷಗಳಿಂದ ಈ ಧ್ಯೇಯಧಿದಡಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ಈ ಹೊಸ ಸಭಾಂಗಣವೂ ಅದರ ಒಂದು ಭಾಗಧಿ ಎಂದು ಆರ್ಚ್‌ ಬಿಷಪ್‌ ರೆ| ಡಾ| ಬರ್ನಾರ್ಡ್‌ ಮೊರಾಸ್‌ ಹೇಳಿದರು. 

ಈ ಸಭಾಂಗಣ ಒಂದು ಮಹಾನ್‌ ಸ್ಮಾರಕ ಕಟ್ಟಡವಾಗಿದೆ ಎಂದು ಅಧ್ಯಕ್ಷತೆ ವಹಿಧಿಸಿದ್ದ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ ಹೇಳಿದರು. ಇದರ ನಿರ್ಮಾಣಕ್ಕೆ ಸಹಕರಿಸಿದ ಫಾ| ಪ್ಯಾಟ್ರಿಕ್‌ ರೊಡ್ರಿಗಸ್‌ ಮತ್ತು ತಂಡವನ್ನು ಅವರು ಅಭಿನಂದಿಸಿದರು. 

ಸಮ್ಮಾನ
ಈ ಭವ್ಯ ಸಭಾಂಗಣ ನಿರ್ಮಾಣದ ರೂವಾರಿ ಫಾ| ಮುಲ್ಲರ್‌ ಸಂಸ್ಥೆಗಳ ನಿರ್ದೇಧಿಶಕ ಫಾ| ಪ್ಯಾಟ್ರಿಕ್‌ ರೊಡ್ರಿಗಸ್‌ ಅವರನ್ನು ಬಿಷಪ್‌ ಸಮ್ಮಾನಿಸಿದರು. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು. 

ಮಂಗಳೂರು ಧರ್ಮಪ್ರಾಂತದ ಪಾಲನಾ ಪರಿಷತ್‌ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ಫಾ| ಮುಲ್ಲರ್‌ ಮೆಡಿಕಲ್‌ ಕಾಲೇಜಿನ ಡೀನ್‌ ಡಾ| ಜೆ.ಪಿ. ಆಳ್ವ, ವೈಸ್‌ ಡೀನ್‌ ಡಾ| ಪದ್ಮಜಾ, ಮೆಡಿಕಲ್‌ ಫೆಸಿಲಿಟೀಸ್‌ ಮುಖ್ಯಸ್ಥ ಡಾ| ಸಂಜೀವ ರೈ, ಹೋಮಿಯೋಪತಿ ಮೆಡಿಕಲ್‌ ಕಾಲೇಜು ಮತ್ತು ಪಾರಾ ಮೆಡಿಕಲ್‌ ಕೋರ್ಸ್‌ಧಿಗಳ ಮುಖ್ಯಸ್ಥರು, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಸಿಬಂದಿ ಭಾಗವಹಿಸಿದ್ದರು. 

ಆಸ್ಪತ್ರೆ ಆಡಳಿತಾಧಿಕಾರಿ ಫಾ| ರಿಚಾರ್ಡ್‌ ಕುವೆಲ್ಲೊ ವಂದಿಸಿದರು. 
ಡಾ| ನಿಕೋಲ್‌ ಪಿರೇರಾ, ಡಾ| ಪ್ರೀತಿ ಜೈನ್‌ ಮತ್ತು ಸುದೀಪ್‌ ಪಾಯ್ಸ ಕಾರ್ಯಕ್ರಮ ನಿರ್ವಹಿಸಿದರು.

ಅತ್ಯಾಧುನಿಕ ದೃಶ್ಯ-ಶ್ರಾವ್ಯ ಮಾಧ್ಯಮ ವ್ಯವಸ್ಥೆ 
“ದಿ ಫಾದರ್‌ ಮುಲ್ಲರ್‌ ಕನ್ವೆನ್ಶನ್‌ ಸೆಂಟರ್‌’ ಅತ್ಯಾಧುನಿಕ ದೃಶ್ಯ-ಶ್ರಾವ್ಯ ಮಾಧ್ಯಮ ವ್ಯವಸ್ಥೆ ಹೊಂದಿದ್ದು, ಕೌಶಲಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ. ಒಂದೇ ಸೂರಿನಡಿ ಮುಲ್ಲರ್‌ ಆಡಿಟೋರಿಯಂ, ಮುಲ್ಲರ್‌ ಡೈನ್‌ ಹಾಗೂ ಮುಲ್ಲರ್‌ ಮಿನಿ ಹಾಲ್‌ ಇದೆ. ಮುಲ್ಲರ್‌ ಆಡಿಟೋರಿಯಂ 38,750 ಚದರ ಅಡಿ ವಿಸ್ತಾರವಾಗಿದ್ದು, 3,500 ಚದರ ಅಡಿಯ ವಿಶಾಲ ವೇದಿಕೆ ಹೊಂದಿದೆ. ಗ್ರೀನ್‌ ರೂಂ, ವಾಶ್‌ರೂಂಧಿನಂತಹ ಸೌಲಭ್ಯಗಳೊಂದಿಗೆ ಅತ್ಯಾಧುನಿಕ ಲೈಟಿಂಗ್‌ ವ್ಯವಸ್ಥೆ ಹಾಗೂ ಬೋಸ್‌ನ ವಿಶಿಷ್ಟ ಧ್ವನಿ ವ್ಯವಸ್ಥೆ ಇದೆ. ಇದರಲ್ಲಿ 1,750ಕ್ಕೂ ಅಧಿಧಿಕ ಮಂದಿ ಏಕಕಾಲದಲ್ಲಿ ಕುಳಿತುಧಿಕೊಳ್ಳಧಿಬಹುದು. ಮಿನಿ ಹಾಲ್‌ 5,600 ಚದರ ಅಡಿ ವಿಸ್ತಾರವಿದ್ದು, 500 ಮಂದಿಯ ಆಸನ ವ್ಯವಸ್ಥೆ ಹೊಂದಿದೆ. ಆಡಿಟೋರಿಯಂ ಮತ್ತು ಮಿನಿ ಹಾಲ್‌ಗೆ ಸಂಪರ್ಕ ಇರುವ ಮುಲ್ಲರ್‌ ಡೈನ್‌ 25,700 ಚದರ ಅಡಿ ವಿಸ್ತೀರ್ಣ ಹೊಂದಿದೆ. ಏಕಕಾಲಕ್ಕೆ 1,000 ಮಂದಿಗೆ ಭೋಜನ ವ್ಯವಸ್ಥೆ ಕಲ್ಪಿಸಬಹುದು. ಎರಡೂ ಹಾಲ್‌ಗ‌ಳಲ್ಲಿ ಕಾರ್ಯಕ್ರಮ ಇದ್ದರೂ ಆತಿಥ್ಯ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಪಾರ್ಟಿ, ಸಭೆ ಸಮಾರಂಭ, ಸಮ್ಮೇಳನ, ಸಮಾವೇಶ ಹಾಗೂ ಇತರ ಕಾರ್ಯಕ್ರಮ ನಡೆಸಬಹುದಾಗಿದ್ದು, ಮೇ 15ರ ಬಳಿಕ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next