Advertisement

ಚೀನ ತನ್ನ ಆಪ್ತ ಸ್ನೇಹಿತನಿಗೆ ಕೊಟ್ಟ ಕೊಡುಗೆ ಇದು

09:12 AM Apr 06, 2020 | mahesh |

ಮಣಿಪಾಲ: ಆಪತ್ಕಾಲದಲ್ಲಿ ಆಗುವವನೇ ನಿಜವಾದ ಗೆಳೆಯ ಎಂಬ ಗಾದೆ ಮಾತಿದೆ.  ಇದು ಈ ಹಿಂದಿನಿಂದಲೂ ಚೀನ -ಪಾಕಿಸ್ಥಾನಗಳ ನಡುವಿನ ಸಂಬಂಧದಲ್ಲಿ ಸಾಬೀತಾಗುತ್ತಿರುವ ಅಂಶ. ಚೀನ ಭಾರತವನ್ನು ಹದ್ದು ಬಸ್ತಿನಲ್ಲಿಟ್ಟುಕೊಳ್ಳಲು ಪಾಕಿಸ್ಥಾನವನ್ನು ಬಳಸಿ ಕೊಳ್ಳುತ್ತಿರುವ ಕುತಂತ್ರವೂ ಹೌದು. ಅದು ಬೇರೆಯ ಮಾತು. ಈಗ ಏನಿದ್ದರೂ ಕೋವಿಡ್-19 ಸಮಯ. ಪಾಕಿಸ್ಥಾನವೂ ಸಾಕಷ್ಟು ಕಷ್ಟದಲ್ಲಿದೆ. ಕೋವಿಡ್-19 ವಿರುದ್ಧ ಹೋರಾಡಲು ಅದಕ್ಕೆ ಶಸ್ತ್ರಾಸ್ತ್ರಗಳ (ಮಾಸ್ಕ್, ಪರೀಕ್ಷಾ ಕಿಟ್‌ ಇತ್ಯಾದಿ) ಕೊರತೆ ಇದೆ. ಅದಕ್ಕಾಗಿ ಚೀನದ ಸಹಾಯವನ್ನು ಕೋರಿತ್ತು ಪಾಕಿಸ್ಥಾನ.

Advertisement

ತನ್ನ ಗೆಳೆಯ ಅದರಲ್ಲೂ ಪರಮಾಪ್ತ ಗೆಳೆಯ ಕೇಳಿದ್ದಾನೆಂದರೆ ಇಲ್ಲವೆನ್ನಲು ಸಾಧ್ಯವೇ? ಎಂದಿಗೂ ಇಲ್ಲ. ಹಾಗಾಗಿ ಚೀನವು ಎಲ್ಲ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಷ್ಟೇ ಅಲ್ಲ, ಈಡೇರಿಸಿತು. ಆದರೆ.. ಸಮಸ್ಯೆಯಾದದ್ದು ಎಲ್ಲಿ ಎಂದರೆ, ಚೀನವು ಒಳ ಉಡುಪುಗಳಿಂದ ತಯಾರಿಸಿದ ಮಾಸ್ಕ್ ಗಳನ್ನು ರಫ್ತು ಮಾಡಿತು. ಪಾಕಿಸ್ಥಾನಕ್ಕೇನು ಗೊತ್ತು ಈ ಹಕೀಕತ್‌. ಬಂದ ಬಂಡಲನ್ನು ಬಿಚ್ಚಿ ನೋಡಿದರೆ ಪಾಕಿಸ್ಥಾನವೇ ಗಾಬರಿಯಾಯಿತು. ಅದರಲ್ಲಿ ಬಂದವುಗಳೆಲ್ಲವೂ ಒಳ ಉಡುಪುಗಳಿಂದ ತಯಾರಿಸಿದ್ದಾಗಿದ್ದವು. ಈ ಬೆಳವಣಿಗೆಯಿಂದ ಪಾಕಿಸ್ಥಾನ ತೀರಾ ಮುಜುಗರಕ್ಕೀಡಾಗಿದೆ.

ಪಾಕಿಸ್ಥಾನ ಸುದ್ದಿ ಸಂಸ್ಥೆ ವರದಿ ಮಾಡಿರುವ ಪ್ರಕಾರ, ಎನ್‌​-95 ಮಾಸ್ಕ್​ ಪೂರೈಸುವಂತೆ ಪಾಕಿಸ್ಥಾನ ಚೀನಕ್ಕೆ ಮನವಿ ಮಾಡಿತ್ತು. ಆದರೆ ಚೀನ ಒಳ ಉಡುಪುಗಳಿಂದ ರೂಪಿಸಿದ ಮಾಸ್ಕ್​ ರವಾನಿಸಿದೆ ಎಂದು ತಿಳಿದು ಬಂದಿದೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಪಾಕಿಸ್ಥಾನಕ್ಕೆ ತಕ್ಕ ಶಾಸ್ತಿಯಾಗಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ. ಚೀನ ಸಮಯ ಸಾಧಿಸಿ ಹೊಡೆತ ನೀಡಿದೆ ಎಂದೂ ಕೆಲವರು ಕಾಮೆಂಟ್‌ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next