Advertisement

ಡೋಕ್ಲಾಮ್‌ಗೆ ತಲುಪಲು ಸೇನೆಗಿನ್ನು 40 ನಿಮಿಷ ಸಾಕು

11:24 AM Oct 05, 2019 | sudhir |

ನವದೆಹಲಿ: ಎರಡು ವರ್ಷಗಳ ಹಿಂದೆ ಭಾರತ ಮತ್ತು ಚೀನಾ ಮಧ್ಯೆ 73 ದಿನಗಳ ಕಾಲ ಸಂಘರ್ಷಕ್ಕೆ ಕಾರಣವಾಗಿದ್ದ ಸ್ಥಳಕ್ಕೆ ಈಗ ಬಾರ್ಡರ್‌ ರೋಡ್‌ ಆರ್ಗನೈಸೇಶನ್‌ (ಬಿಆರ್‌ಒ) ರಸ್ತೆ ನಿರ್ಮಾಣ ಮಾಡಿದೆ. ಇದರಿಂದ ಭಾರತೀಯ ಸೇನೆಯು ಡೋಕ್ಲಾಂಗೆ ಅತ್ಯಂತ ಸುಲಭವಾಗಿ ತಲುಪಬಹುದು. ಡೋಕ್ಲಾಂನ ಸಮೀಪದ ಡೋಕಲದಿಂದ ಭೀಮ್‌ ಬೇಸ್‌ವರೆಗೆ ಈ ರಸ್ತೆ ನಿರ್ಮಾಣ ಮಾಡಲಾಗಿದ್ದು, ಮೊದಲು ಕಾಲುದಾರಿಯನ್ನು ಬಳಸಿ ಈ ಸ್ಥಳಕ್ಕೆ ಸಾಗಲು 7 ಗಂಟೆ ಬೇಕಾಗಿತ್ತು. ಆದರೆ ಈಗ ರಸ್ತೆಯ ಮೂಲಕ ಕೇವಲ 40 ನಿಮಿಷಗಳಲ್ಲಿ ಡೋಕಲ ತಲುಪಬಹುದು. 2015 ರಲ್ಲಿ ಈ ರಸ್ತೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿತ್ತು.2018 ರಲ್ಲಿ ಪೂರ್ಣಗೊಳಿಸಲಾಗಿದ್ದು, ಈಗ ಅಧಿಕೃತವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ಮುಂದೊಂದು ದಿನ ಭಾರತ-ಚೀನಾ ಮಧ್ಯೆ ಸೇನಾ ಸಂಘರ್ಷ ನಡೆದಲ್ಲಿ ಈ ಭಾಗಕ್ಕೆ ತಲುಪುವುದು ಅತ್ಯಂತ ಸುಲಭವಾಗಲಿದೆ.

Advertisement

ಸದ್ಯ ಈ ಪ್ರದೇಶಕ್ಕೆ ತೆರಳಲು ಇದೊಂದೇ ಮಾರ್ಗವನ್ನು ಸೇನೆ ಅನುಸರಿಸಬೇಕಿದ್ದು, ಮತ್ತೂಂದು ರಸ್ತೆಯನ್ನೂ ಬಿಆರ್‌ಒ ನಿರ್ಮಾಣ ಮಾಡುತ್ತಿದೆ. ಫ್ಲಾಗ್‌ ಹಿಲ್‌ನಿಂದ ಡೊಕಲಗೆ ರಸ್ತೆ ನಿರ್ಮಾಣ ನಡೆಯುತ್ತಿದ್ದು, 33 ಕಿ.ಮೀ ಮಾರ್ಗ 2021 ಮಾರ್ಚ್‌ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next