Advertisement

ಐಟಿ ರಿಟರ್ನ್ಸ್ ಗಡುವು ವಿಸ್ತರಣೆ

12:20 AM May 02, 2021 | Team Udayavani |

ಹೊಸದಿಲ್ಲಿ: ಆದಾಯ ತೆರಿಗೆ ಪಾವತಿದಾರರಿಗೆ ಹಲವು ವಿಭಾಗಗಳಲ್ಲಿ ಗಡುವನ್ನು ವಿಸ್ತರಿಸಲಾಗಿದೆ. ಪ್ರಸ್ತುತ ಕೊರೊನಾ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಇರುವುದರಿಂದ ಗಡುವನ್ನು ವಿಸ್ತರಿಸಬೇಕೆಂದು ದೇಶಾದ್ಯಂತ ಮನವಿಗಳು ಬಂದಿದ್ದವು. ಇದನ್ನು ಸಚಿವಾಲಯ ಪುರಸ್ಕರಿಸಿದೆ.

Advertisement

ಈ ವರ್ಷ ಎ. 1ಕ್ಕೆ ಸಲ್ಲಿಸಬೇಕಾಗಿದ್ದ ಆದಾಯ ತೆರಿಗೆ ರಿಟರ್ನ್ಸ್ ಗಡುವನ್ನು ಮೇ 31ರ ವರೆಗೆ ವಿಸ್ತರಿಸಿದೆ. ಹಾಗೆಯೇ 2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ವಿಳಂಬಿತ ಸಲ್ಲಿಕೆಗೆ ಅಂತಿಮ ಗಡುವು ಮಾ. 31 ಆಗಿತ್ತು. ಅದನ್ನು ಪರಿಷ್ಕರಿಸಿ ಮೇ 31ರ ವರೆಗೆ ವಿಸ್ತರಿಸಲಾಗಿದೆ. ತೆರಿಗೆ ಕಡಿತಗೊಂಡ ಮಾಹಿತಿಯಿರುವ ಚಲನ್‌ಗಳನ್ನು ಎ. 30ರೊಳಗೆ ಸಲ್ಲಿಸಲು ಈ ಹಿಂದೆ ತಿಳಿಸಲಾಗಿತ್ತು. ಅದಕ್ಕೂ ಮೇ 31ರ ವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಆದಾಯ ತೆರಿಗೆ ಆಯುಕ್ತರಿಗೆ ಮನವಿ ಸಲ್ಲಿಸಲು, ವಿವಾದ ಇತ್ಯರ್ಥಕ್ಕೆ ಆಕ್ಷೇಪಣೆ ಸಲ್ಲಿಸುವುದಕ್ಕೂ ಮೇ 31ರ ವರೆಗೆ ಅವಕಾಶವಿದೆ.

1.41 ಲಕ್ಷ ಕೋ.ರೂ. ಜಿಎಸ್‌ಟಿ ಸಂಗ್ರಹ

ಎಪ್ರಿಲ್‌ನಲ್ಲಿ ದಾಖಲೆಯ 1.41 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಮಾರ್ಚ್‌ಗೆ ಹೋಲಿಸಿದರೆ, ಇದು ಶೇ. 14 ಹೆಚ್ಚು. ಎಪ್ರಿಲ್‌ನಲ್ಲಿ ಸ್ಥಳೀಯ ವಹಿವಾಟು ಮೂಲಕವೇ ಹೆಚ್ಚು ತೆರಿಗೆ ಹರಿದು ಬಂದಿದೆ. ಇದು ಕೂಡ ಕಳೆದ ತಿಂಗಳಿಗೆ ಹೋಲಿಸಿದರೆ ಶೇ. 21ರಷ್ಟು ಹೆಚ್ಚು ಎಂದು ಕೇಂದ್ರ ಸರಕಾರ ತಿಳಿಸಿದೆ. ಕಳೆದ ಏಳು ತಿಂಗಳುಗಳಿಂದ ಪ್ರತೀ ತಿಂಗಳು 1 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು ಜಿಎಸ್‌ಟಿ ಸಂಗ್ರಹವಾಗುತ್ತಿದೆ. ಈ ಮೂಲಕ ದೇಶದ ಆರ್ಥಿಕತೆ ಹಳಿಗೆ ಬರುತ್ತಿರುವುದು ನಿಚ್ಚಳವಾಗಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next