Advertisement

ಉದ್ಯಮಿ, ಜೆಡಿಎಸ್‌ ಮುಖಂಡ ಫಾರೂಕ್‌ ಮನೆ, ಕಚೇರಿಗಳ ಮೇಲೆ ಐಟಿ ದಾಳಿ 

03:58 PM Feb 24, 2017 | |

ಬೆಂಗಳೂರು /ಮಂಗಳೂರು: ಉದ್ಯಮಿ ಮತ್ತು ಜೆಡಿಎಸ್‌ ಮುಖಂಡ ಬಿ.ಎಂ.ಫಾರೂಕ್‌ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಶುಕ್ರವಾರ ಏಕಕಾಲದಲ್ಲಿ  50ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ. 

Advertisement

ಫಾರೂಕ್‌ ಅವರು ಕಾಂಗ್ರೆಸ್‌ ಶಾಸಕ ಮೊಯಿದ್ದೀನ್‌ ಬಾವಾ ಅವರ ಸಹೋದರ. ಫಿಜಾ ಡೆವ್‌ಲಪರ್ಸ್‌ ಸೇರಿದಂತೆ ಹಲವು ಶಿಪ್ಪಿಂಗ್‌ಕಂಪೆನಿಗಳ ಮಾಲಿಕರಾಗಿರುವ ಫಾರೂಕ್‌ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಪರಾಜಿತರಾಗಿದ್ದರು. 

ಚುನಾವಣೆ ವೇಳೆ ಫಾರೂಕ್‌ 737 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದರು. 

ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next