Advertisement
ಮಾಜಿ ಸಿಎಂ ಬಿಎಸ್‌ವೈ ಅವರ ಆಪ್ತ ಉಮೇಶ್, ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆಪ್ತ ಅರವಿಂದ್, ಪ್ರಥಮ ದರ್ಜೆ ಗುತ್ತಿಗೆದಾರರು ಮತ್ತು ಲೆಕ್ಕಪರಿಶೋಧಕರ ಮನೆ, ಕಚೇರಿಗಳು ಸೇರಿ 50ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಶುಕ್ರವಾರವೂ ಬೆಂಗಳೂರು, ತುಮಕೂರು, ಕೊಪ್ಪಳ ಮತ್ತು ಇತರೆಡೆ ದಾಳಿ ಮುಂದುವರಿಸಿದ್ದು, ಸುಮಾರು 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ.
Related Articles
Advertisement
ಉಮೇಶ್ ಮತ್ತು ಸೋಮಶೇಖರ್ ನಡುವೆ ಕೋಟ್ಯಂತರ ರೂ. ಅವ್ಯವಹಾರ ನಗದು ಮತ್ತು ಬ್ಯಾಂಕ್ ಖಾತೆಗಳ ಮೂಲಕ ನಡೆದಿದೆ. ಹೀಗಾಗಿ ಸೋಮಶೇಖರ್ ಮನೆಯಲ್ಲಿ ಶೋಧ ನಡೆಸಲಾಗಿದೆ. ಉಮೇಶ್ ಮನೆಯಲ್ಲಿ ಲಭಿಸಿರುವ ಪೆನ್‌ಡ್ರೈವ್ ಮತ್ತು ನೀರಾವರಿ ಇಲಾಖೆಗೆ ಸೇರಿದ ಕಡತಗಳು, ಬ್ಯಾಂಕ್ ಖಾತೆಗಳ ವಿವರಗಳು ಮತ್ತು ನಿಗದಿತ ಠೇವಣಿಗಳ ಮಾಹಿತಿ ಸಂಗ್ರಹಿಸಲಾಗಿದೆ. ಈ ಆಧಾರದ ಮೇಲೆಯೂ ಸೋಮಶೇಖರ್ ಮೇಲೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗುತ್ತಿಗೆದಾರ ಶ್ರೀನಿವಾಸ್ ಅವರ ಮನೆಮತ್ತು ಎತ್ತಿನಹೊಳೆ ಯೋಜನೆಯ ಅಂದಾಜು 245 ಕೋಟಿ ರೂ. ಮೌಲ್ಯದ ಟೆಂಡರ್ ಪಡೆದಿತ್ತು ಎನ್ನಲಾದ ತುಮಕೂರಿನ ಕೊರಟಗೆರೆ ತಾಲೂಕಿನ ಸಿಂಗರೇಹಳ್ಳಿಯಲ್ಲಿರುವ ಎಸ್‌ಎನ್‌ಸಿ ಕಂಪೆನಿ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಕಂಪೆನಿ ಆವರಣದಲ್ಲಿ ದಾಸ್ತಾನು ಮಾಡಲಾಗಿದ್ದ ಕಬ್ಬಿಣ ಮತ್ತು ಸಿಮೆಂಟ್‌ನ ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಉಮೇಶ್ ಆದಾಯದಲ್ಲಿ ಶೇ. 300ರಷ್ಟು ಏರಿಕೆ?ಬಿಎಸ್‌ವೈ ಆಪ್ತ ಉಮೇಶ್ ಅವರ ಆದಾಯದಲ್ಲಿ ಶೇ. 300ರಷ್ಟು ಏರಿಕೆಯಾಗಿರುವುದು ಎರಡು ದಿನಗಳ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಕಾವೇರಿ ನೀರಾವರಿ ನಿಗಮ, ಕೃಷ್ಣಾ ಮೇಲ್ದಂಡೆ ಯೋಜನೆಯ ಅವ್ಯವಹಾರಗಳಲ್ಲಿ ಉಮೇಶ್ ಪಾತ್ರ ಇದೆ ಎನ್ನಲಾಗಿದೆ. ಬಾಡಿಗೆ ಮನೆವಾಸ!
ಕೋಟ್ಯಂತರ ರೂ. ಅವ್ಯ ವಹಾರದಲ್ಲಿ ಭಾಗಿಯಾಗಿ, ಲಕ್ಷಾಂತರ ರೂ. ವ್ಯಯಿಸಿ ಹೊಸ ಮನೆ ನಿರ್ಮಿಸಿದ್ದರೂ ಉಮೇಶ್ ಬಾಡಿಗೆ ಮನೆಯಲ್ಲಿದ್ದರು. ಈ ಮನೆತನಗೆ ಅದೃಷ್ಟದಾಯಕ ಎಂದು ಭಾವಿಸಿದ್ದೇ ಇದಕ್ಕೆ ಕಾರಣ. ಈ ಮನೆಯಲ್ಲಿ ಹಿಂದೆ ಕೃಷ್ಣಯ್ಯ ಶೆಟ್ಟಿ ಎಂಬವರಿದ್ದರು. ಅವರು ಇಲ್ಲಿದ್ದೇ ಹಣ ಗಳಿಸಿದ್ದರಿಂದ ಉಮೇಶ್ ವಾಸಮುಂದುವರಿಸಿದ್ದರು ಎನ್ನಲಾಗಿದೆ. ವಿಪರ್ಯಾಸವೆಂದರೆ ರಾಜ್ಯ ಗೃಹ ಮಂಡಳಿ ಅವ್ಯವಹಾರದಲ್ಲಿ ಕೃಷ್ಣಯ್ಯ ಶೆಟ್ಟಿ ಬಂಧನವಾಗಿತ್ತು.