Advertisement

ಸಚಿವ ಡಿಕೆ ಆಪ್ತ ವಿಜಯ್ ಮುಳಗುಂದ ನಿವಾಸದ ಮೇಲೆ ಐಟಿ ದಾಳಿ

11:06 AM Aug 30, 2017 | Sharanya Alva |

ಬೆಂಗಳೂರು:ಇಂಧನ ಸಚಿವ, ಕಾಂಗ್ರೆಸ್ ನ ಪ್ರಭಾವಿ ಮುಖಂಡ ಡಿಕೆ ಶಿವಕುಮಾರ್ ಆಪ್ತ, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾವೇರಿ ಹ್ಯಾಂಡ್ ಲೂಮ್ ಅಧ್ಯಕ್ಷ ಮುಳಗುಂದ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಬೆಂಗಳೂರಿನ ರಾರಾಜಿನಗರದಲ್ಲಿರುವ ವಿಜಯ್ ಮುಳಗುಂದ(ಕೆಪಿಸಿಸಿಯ ಹಾಲಿ ಕಾರ್ಯದರ್ಶಿ) ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ತನಿಖೆ ನಡೆಸುತ್ತಿರುವುದಾಗಿ ವರದಿ ಹೇಳಿದೆ.

ಯಾರು ಈ ವಿಜಯ್ ಮುಳಗುಂದ?

ಈಗಲ್ಟನ್ ರೆಸಾರ್ಟ್ ನಲ್ಲಿ ಗುಜರಾತ್ ಶಾಸಕರ ಉಸ್ತುವಾರಿ ವಹಿಸಿದ್ದರು. ಮತ್ತೆ ಶಾಸಕರನ್ನು ಗುಜರಾತ್ ಗೆ ವಿಜಯ್ ಬಿಟ್ಟು ಬಂದಿದ್ದರು. ವಿಲಾಸ್ ರಾವ್ ದೇಶಮುಖ್ ಆಪ್ತರಾಗಿದ್ದ ವಿಜಯ್ ಮುಳಗುಂದ. ದೇಶಮುಖ್ ಸರ್ಕಾರ ಪತನವಾಗುವ ಸಂದರ್ಭದಲ್ಲಿ ವಿಜಯ್ ಅವರು ಮಹತ್ವದ ಪಾತ್ರ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next