Advertisement

ಆಪ್‌ ಶಾಸಕ ಬಲ್ಯಾನ್‌ ನಿವಾಸಕ್ಕೆ ಐಟಿ ದಾಳಿ; 2.56 ಕೋಟಿ ನಗದು ವಶ

06:03 AM Mar 09, 2019 | udayavani editorial |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ಆಪ್‌ ಶಾಸಕ ನರೇಶ್‌ ಬಲ್ಯಾನ್‌ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖಾಧಿಕಾರಿಗಳ ದಾಳಿ ಮುಂದುವರಿದಿದೆ. 

Advertisement

ದಿಲ್ಲಿಯ ಉತ್ತಮ್‌ ನಗರದಲ್ಲಿನ ಆಪ್‌ ಶಾಸಕ ಬಲ್ಯಾನ್‌ ಅವರ ನಿವಾಸದ ಮೇಲೆ ನಿನ್ನೆ ಶುಕ್ರವಾರ ಸಂಜೆಯಿಂದ ಆರಂಭಗೊಂಡ ಐಟಿ ದಾಳಿ ಇಂದು ಶನಿವಾರ ಬೆಳಗ್ಗಿನ ವರೆಗೂ ಸಾಗಿತು ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ದಾಳಿಯ ವೇಳೆ ಐಟಿ ಅಧಿಕಾರಿಗಳು ಆಪ್‌ ಶಾಸಕನ ನಿವಾಸದಲ್ಲಿದ್ದ 2.56 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿರವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಈ ಹಿಂದೆ ಇದೇ ಆಪ್‌ ಶಾಸಕ ಬಲ್ಯಾನ್‌ ಅವರು “ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತಡೆ ಒಡ್ಡುವ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಅವರಂತಹ ಸರಕಾರಿ ಅಧಿಕಾರಿಗಳನ್ನು ಹೊಡೆದು ಬುದ್ಧಿಕಲಿಸಬೇಕು’ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಈ ಹೇಳಿಕೆಗಾಗಿ ಬಲ್ಯಾನ್‌ ವಿರುದ್ಧ ಕೇಸು ದಾಖಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next