Advertisement
2024ಕ್ಕೆ ಐಟಿಗಳಲ್ಲಿ ಶೇ.9.8 ವೇತನ ಹೆಚ್ಚಳ ಭಾರತದ ಹಲವು ಐಟಿ ಸಂಸ್ಥೆಗಳು 2023ರಲ್ಲಿ ತಮ್ಮ ಉದ್ಯೋಗಿಗಳ ವೇತನ ಹೆಚ್ಚಳವನ್ನು ಕೈಬಿಟ್ಟಿವೆ ಆದರೆ, 2024ಕ್ಕೆ ಉದ್ಯೋಗಿಗಳಿಗೆ ಶೇ.9.8ರಷ್ಟು ವೇತನ ಹೆಚ್ಚಳವನ್ನು ಘೋಷಿಸಲು ಯೋಜಿಸಿದ್ದು ದೇಶದ 150 ಐಟಿ ಸಂಸ್ಥೆಗಳು ಇದೇ ಯೋಜನೆಯನ್ನು ಹೊಂದಿರುವುದಾಗಿ ತಿಳಿಸಿವೆ. ಡಬ್ಲೂéಟಿಡಬ್ಲೂé ಸ್ಯಾಲರಿ ಪ್ಲಾನಿಂಗ್ ರಿಪೋರ್ಟ್ ಪ್ರಕಾರ ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ನಂಥ ಟೆಕ್ ದೈತ್ಯ ಸಂಸ್ಥೆಗಳೂ ಕೂಡ ತಮ್ಮ ಉದ್ಯೋಗಿಗಳಿಗೆ ಶೇ.8ರಿಂದ 10ರಷ್ಟು ಹೈಕ್ ನೀಡಲು ಯೋಜಿಸಿವೆ ಎನ್ನಲಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ಭಾರತದ ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಸವಾಲು ತೀವ್ರಗೊಂಡಿದ್ದು, 25 ವರ್ಷದಲ್ಲೇ ಇದೇ ಮೊದಲಬಾರಿಗೆ ಐಟಿ ಕ್ಷೇತ್ರದಲ್ಲಿ ಅತಿಹೆಚ್ಚು ಉದ್ಯೋಗ ಕಡಿತವಾಗಿದೆಯಂತೆ. ಹೀಗೆಂದು ಜೀ ಬಿಸಿನೆಸ್ ವರದಿ ಮಾಡಿದೆ. ಟಿಸಿಎಸ್‌ನಲ್ಲಿ 5,810 ಮಂದಿ ವಜಾಗೊಂಡಿದ್ದರೆ, ಇನ್ಫೋಸಿಸ್‌ನಲ್ಲಿ 14,470 ಮಂದಿ ಕೆಲಸ ತೊರೆದಿದ್ದಾರೆ. ಎಚ್‌ಸಿಎಲ್‌ನಲ್ಲಿ 4,805 ಹಾಗೂ ವಿಪ್ರೋನಲ್ಲಿ 13,863 ಮಂದಿ 2024ನೇ ಸಾಲಿನ ಆರ್ಥಿಕ ವರ್ಷದ ವೇಳೆಗೆ ಕೆಲಸ ಕಳೆದುಕೊಂಡಿದ್ದಾರೆ.