ನವದೆಹಲಿ: ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಭಾರತದಲ್ಲಿ ಮತ್ತಷ್ಟು ಮೊಬೈಲ್ ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಿದ್ದು, ಹೆಚ್ಚಿನವು ಚೈನಾ ಮೂಲದ ಆ್ಯಪ್ ಗಳು ಎಂದು ಹಿಂದು ಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಪ್ರಮುಖವಾಗಿ ಹಲೋ ಲೈಟ್, ಶೇರ್ ಇಟ್ ಲೈಟ್, ಬಿಗೋ ಲೈಟ್ , VFY ಲೈಟ್ ಮುಂತಾದ ಅಪ್ಲಿಕೇಶನ್ ಗಳನ್ನು ಕೂಡ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್ ನಿಂದ ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಬಾರಿ ಕೂಡ ಕೇಂದ್ರ ಸರ್ಕಾರ ಅತೀ ಹೆಚ್ಚು ಜನಪ್ರಿಯವಾಗಿದ್ದ ಟಿಕ್ ಟಾಕ್ ಸೇರಿದಂತೆ 59 ಚೈನಾ ಮೂಲದ ಅಪ್ಲಿಕೇಶನ್ ಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ಇವುಗಳು ದೇಶದ ಸಾರ್ವಭೌಮತೆ, ಸಮಗ್ರತೆ ಮತ್ತು ಭದ್ರತೆಗೆ ಅಪಾಯವನ್ನು ತಂದೊಡ್ಡುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು. ಆದರೇ ಬ್ಯಾನ್ ಮಾಡಿದ ಹೊರತಾಗಿಯೂ ಕೆಲವೊಂದು ಅಪ್ಲಿಕೇಷನ್ ಗಳು ಕಾರ್ಯನಿರ್ವಹಿಸುತ್ತಿದ್ದರಿಂದ ಇದೀಗ ಎಲ್ಲವನ್ನೂ ಸ್ಟೋರ್ ಗಳಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.
ಪ್ರಮುಖವಾಗಿ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಚಲನ ಮೂಡಿಸಿತ್ತು.