ನವದೆಹಲಿ: ಪಾಕಿಸ್ತಾನದ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ಗೆ ಸಂಬಂಧಿಸಿದ 11 ವಿಡಿಯೋ ಲಿಂಕ್ ಗಳನ್ನು ಕೂಡಲೇ ತೆಗೆದು ಹಾಕುವಂತೆ ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಜಾಗತಿಕ ವೀಡಿಯೋ ತಾಣವಾದ ಯೂಟ್ಯೂಬ್ ಗೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಅಭಿನಂದನ್ ಗೆ ಸಂಬಂಧಿಸಿದಂತೆ ಹರಿದಾಡುತ್ತಿದ್ದ ವಿಡಿಯೋ ಗುರುವಾರ ಬೆಳಗ್ಗೆ ಕೆಲವು ಪ್ಲೇ ಆಗುತ್ತಿರಲಿಲ್ಲವಾಗಿತ್ತು!
ಪತನಗೊಂಡ ವಿಮಾನದಿಂದ ಪ್ಯಾರಚೂಟ್ ಮೂಲಕ ಕಳಗೆ ಜಿಗಿದು ಬಿದ್ದಿದ್ದ ಅಭಿನಂದನ್ ಅವರನ್ನು ಪಾಕ್ ನ ಸ್ಥಳೀಯರು ಮತ್ತು ಸೇನೆಯವರು ಹಿಡಿದ ಬಳಿಕ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ನಂತರ ನಮ್ಮ ಪೈಲಟ್ ಅಭಿನಂದನ್ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಆಗಲಿ ಎಂದು ದೇಶಾದ್ಯಂತ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದರು.
ಐಟಿ(ಮಾಹಿತಿ ಮತ್ತು ತಂತ್ರಜ್ಞಾನ) ಮೂಲಗಳ ಪ್ರಕಾರ, ಗೃಹ ಸಚಿವಾಲಯದ ನಿರ್ದೇಶನದಂತೆ ಯೂಟ್ಯೂಬ್ ನಲ್ಲಿರುವ ಕ್ಲಿಪ್ಪಿಂಗ್ ಅನ್ನು ತೆಗೆದುಹಾಕುವಂತೆ ಐಟಿ ಸಚಿವಾಲಯ ಮನವಿ ಮಾಡಿಕೊಂಡಿತ್ತು ಎಂದು ತಿಳಿಸಿದೆ. ತದನಂತರ ವಿಡಿಯೋ ಲಿಂಕ್ ಅನ್ನು ಇದೀಗ ತೆಗೆದು ಹಾಕಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದ್ದವು.