Advertisement

ತಾಲೂಕಿನ ಜನರ ಋಣ ತೀರಿಸುವುದೇ ಕಾಯಕ

05:47 PM Jun 09, 2022 | Team Udayavani |

ಮಾಲೂರು: ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಮೇಲೆ ಜನತೆಯ ಋಣ ತೀರಿಸಲು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಶ್ರಮಿಸಲಾಗುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

Advertisement

ಅವರು ಪಟ್ಟಣದ ಕಾಂಗ್ರೆಸ್‌ ಕಚೇರಿಯ ಮೈದಾನದಲ್ಲಿ ಅವರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳು ಹಾಗೂ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಬೃಹತ್‌ ರಕ್ತದಾನ ಶಿಬಿರ ಆರೋಗ್ಯ ತಪಾಸಣಾ ಶಿಬಿರ ಅಂಗನವಾಡಿ ಕೇಂದ್ರಗಳಿಗೆ ಗಾಡ್ರೇಜ್‌ ಬೀರೂ ವಿತರಣೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ ಬಂದ ಪ್ರೌಢಶಾಲೆಗಳ ಸಹ ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿದರು.

ತಾಲೂಕಿನ ಜನತೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ನಾಲ್ಕು ವರ್ಷಗಳಿಂದ ತಾಲೂಕಿನ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚುವರಿ ಅನುದಾನಗಳನ್ನು ತಂದು ಮುಖ್ಯರಸ್ತೆ ಸಂಪರ್ಕರಸ್ತೆ ಗ್ರಾಮಗಳಲ್ಲಿ ಸಿಸಿ ರಸ್ತೆ ಹೈ ಮಾಸ್‌ ಲೈಟುಗಳು ಅಳವಡಿಸುವುದು ಸೇರಿದಂತೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ ಅಲ್ಲದೆ ಸರ್ಕಾರದಿಂದ ಅರ್ಹ ಫಲಾನುಭವಿಗಳಿಗೆ ಬಿಡುಗಡೆಯಾಗುವ ಸೌಲಭ್ಯಗಳನ್ನು ಕಟ್ಟಕಡೆಯ ಪ್ರಜೆಗಳಿಗೆ ತಲುಪಿಸುವ ಕೆಲಸ ಮಾಡಲಾಗಿದೆ ಎಂದರು.

ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಉತ್ತಮ ರೀತಿಯಲ್ಲಿ ಬಂದಿದೆ ಶೇ. 100 ಫಲಿತಾಂಶ ಇರುವ ಶಾಲಾ ಶಿಕ್ಷಕರನ್ನು ಅಭಿನಂದಿಸಲಾಯಿತು. ಅಲ್ಲದೆ ನನ್ನ ಜನ್ಮದಿನದ ಅಂಗವಾಗಿ ಅಭಿಮಾನಿಗಳು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಯುವಕರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮತ್ತೂಬ್ಬರ ಜೀವ ಉಳಿಸಲು ಬಾಗಿರುವುದು ಶ್ಲಾಘನೀಯವಾದದ್ದು, ಬಡಜನತೆ ತಮ್ಮ ಕೆಲಸಕಾರ್ಯಗಳ ಒತ್ತಡದ ನಡುವೆ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದಿಲ್ಲ.

ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆ ಮಾಡಿಸಲು ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿರುವುದು ಉತ್ತಮ ರೀತಿಯ ಬೆಳವಣಿಗೆಯಾಗಿದೆ ಎಂದು ಹೇಳಿದರು. ವಿಧಾನಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಮಾಜಿ ಶಾಸಕ ಎ.ನಾಗರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರುಗಳಾದ ಎಂ.ಜಿ.ಮಧುಸೂದನ್‌, ಎಚ್‌.ಎಂ.ವಿಜಯನರಸಿಂಹ, ಪುರಸಭಾ ಅಧ್ಯಕ್ಷೆ ಭವ್ಯಾ ಶಂಕರ್‌, ಉಪಾಧ್ಯಕ್ಷೆ ಭಾರತೀ ಶಂಕರಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಜಾಕೀರ್‌ ಖಾನ್‌, ಪುರಸಭಾ ಸದಸ್ಯರಾದ ಆರ್‌.ವೆಂಕಟೇಶ್‌, ಎ.ರಾಜಪ್ಪ, ಮುರಳಿದರ್‌, ಮಂಜುನಾಥ್‌, ಹೇಮ, ಚೈತ್ರ, ಪದ್ಮಾವತಿ, ಕೋಮಲ, ಇಂತಿಯಾಜ್‌, ಮಾಜಿ ಸದಸ್ಯ ಪ್ರದೀಪ್‌ರೆಡ್ಡಿ, ಅಶ್ವಥರೆಡ್ಡಿ, ಶಾಸಕರ ಪತ್ನಿ ರತ್ನಮ್ಮ ನಂಜೇಗೌಡ, ಪುತ್ರರಾದ ಹರೀಶ್‌, ಸುನೀಲ್‌, ಮುಖಂಡರಾದ ಅಂಜನಿ ಸೋಮಣ್ಣ, ಚನ್ನರಾಯಪ್ಪ, ಹನುಮಂತಪ್ಪ, ವೆಂಕಟೇಶಗೌಡ, ಯುವಕಾಂಗ್ರೆಸ್‌ ಅಧ್ಯಕ್ಷ ತನ್ವಿರ್‌, ಸಂತೋಷ್‌, ನಾರಾಯಣಸ್ವಾಮಿ, ನವೀನ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next