Advertisement

ರಬಕವಿ-ಬನಹಟ್ಟಿ: ರಾಷ್ಟ್ರೀಯ ಏಕತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ

09:17 AM Oct 31, 2022 | Team Udayavani |

ರಬಕವಿ-ಬನಹಟ್ಟಿ: ರಾಷ್ಟ್ರೀಯ ಏಕತೆ, ಸಮಗ್ರತೆ ಹಾಗೂ ಭದ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬನಹಟ್ಟಿಯ ಗೃಹ ರಕ್ಷಕದಳದ ಘಟಕಾಧಿಕಾರಿ ಈಶ್ವರ ಗೆದ್ದೆಪ್ಪನವರ ತಿಳಿಸಿದರು.

Advertisement

ಅವರು ಸೋಮವಾರ ಮುಂಜಾನೆ ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ನಿಮಿತ್ತವಾಗಿ ಗೃಹರಕ್ಷಕ ದಳದವರಿಂದ ನಡೆದ ಪಥಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ದಾರ್ ವಲ್ಲಭಾಯಿ ಪಟೇಲರು ರಾಷ್ಟ್ರೀಯ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ದೇಶದ ಉಪ ಪ್ರಧಾನಿಯಾಗಿ, ಗೃಹ ಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರನ್ನು ದೇಶ ಉಕ್ಕಿನ ಮನುಷ್ಯ ಎಂದೇ ಕರೆಯುತ್ತಿತ್ತು. ಪಟೇಲರು ರಾಷ್ಟ್ರಾಭಿಮಾನದ ಸಂಕೇತವಾಗಿದ್ದರು. ಅಂಥ ಮಹಾನ್ ವ್ಯಕ್ತಿಯ ತತ್ವ, ಆದರ್ಶ ಮತ್ತು ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಗೆದ್ದೆಪ್ಪನವರ ತಿಳಿಸಿದರು.

ಬನಹಟ್ಟಿಯ ಈಶ್ವರಲಿಂಗ ಮೈದಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಈ ಸಂದರ್ಭದಲ್ಲಿ ಗೃಹ ರಕ್ಷಕದಳದ ಸಿಬ್ಬಂದಿಗಳಿಗೆ ರಾಷ್ಟ್ರೀಯ ಏಕತೆಯ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧನೆ ಮಾಡಲಾಯಿತು.

Advertisement

ಸಮಾರಂಭದಲ್ಲಿ ಐ.ಜಿ. ಪೂಜಾರಿ, ಎಸ್.ಎಲ್.ಕೋಷ್ಠಿ, ಎಸ್.ಪಿ. ಜಿಡ್ಡಿ, ಎಸ್.ಬಿ. ಭಜಂತ್ರಿ, ಐ.ಕೆ. ಬೀಳಗಿ, ಜಿ.ಎಂ. ಅಥಣಿ, ಎಸ್.ಎಲ್. ಮುರಗೋಡ, ಎಸ್.ಬಿ. ಮಡ್ಡಿಮನಿ ಸೇರಿದಂತೆ ಅನೇಕ ಗೃಹರಕ್ಷಕ ದಳದ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next