Advertisement

Uppunda: ಸಿನಿಮಾ ರೀತಿಯಲ್ಲಿ ಕಾರುಗಳ ಮೇಲಾಟ ಅಪರಾಧ ಕೃತ್ಯಕ್ಕೆ ಬಳಕೆ ಶಂಕೆ

10:40 PM Sep 21, 2024 | Team Udayavani |

ಉಪ್ಪುಂದ: ಸಿನಿಮಾ ಮಾದರಿಯಲ್ಲಿ ವೇಗವಾಗಿ ಬಂದ ಒಂದು ಕಾರನ್ನು ಇನ್ನೊಂದು ಕಾರು ಬೆನ್ನಟ್ಟಿಕೊಂಡು ಬಂದು ಪರಾರಿಯಾಗಲು ಯತ್ನಿಸಿದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಉಪ್ಪುಂದ ಸಮೀಪದ ನಂದನವನದಲ್ಲಿ ನಡೆದಿದೆ.

Advertisement

ಗುರುವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗುರುವಾರ ಸಂಜೆ 3 ಗಂಟೆಗೆ ನಾಲ್ಕು ಜನರಿದ್ದ ಕಾರು ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತೀ ವೇಗವಾಗಿ ಬರುತ್ತಿತ್ತು. ಅದನ್ನು ಬೆನ್ನಟ್ಟಿಕೊಂಡು ಇನ್ನೊಂದು ಕಾರು ಬಂದಿದೆ. ಎದುರಿನ ಕಾರಿನಲ್ಲಿದ್ದ ನಾಲ್ಕು ಜನರ ಪೈಕಿ ಇಬ್ಬರು ಹುಡುಗಿಯರು ಇದ್ದರೆನ್ನಲಾಗಿದೆ. ಈ ಕಾರು ಉಪ್ಪುಂದದ ನಂದನವನ ಎಂಬಲ್ಲಿ ಅಡ್ಡರಸ್ತೆಯಲ್ಲಿ ತಿರುಗಿದ ಬಳಿಕ ಇಬ್ಬರು ಹುಡುಗಿಯರನ್ನು ಇಳಿಸಿ ಕಾರು ಮುಂದಕ್ಕೆ ಸಾಗಿದೆ.

ಇದನ್ನು ಗಮನಿಸಿದ ಮಹಾಬಲೇಶ್ವರ ಮತ್ತು ಸ್ಥಳೀಯ ಯುವಕರು ಎರಡೂ ಕಾರುಗಳನ್ನು ಬೆನ್ನತ್ತಿದ್ದಾರೆ. ಕಾರು ನಂದನವನ ಹೊಳೆಯ ಹತ್ತಿರದ ಮನೆಯ ಬದಿಯಲ್ಲಿ ನಿಲ್ಲಿಸಿ ಹೊಳೆಗೆ ಹಾರಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸ್ಥಳೀಯ ಯುವಕರು ಮತ್ತು ಮಹಿಳೆಯರು ಸೇರಿ ಇಬ್ಬರನ್ನು ಹಿಡಿದಿದ್ದಾರೆ. ಬಳಿಕ ಹಿಂದಿನ ಕಾರಿನಲ್ಲಿದ್ದವರನ್ನು ವಿಚಾರಿಸಿದ್ದಾಗ ಮೊದಲಿನ ಕಾರಿನವರು ತಮ್ಮ ಕಾರನ್ನು ಕಳ್ಳತನ ಮಾಡಿಕೊಂಡು ಬಂದು ಅಪರಾಧ ಕೃತ್ಯಗಳಿಗೆ ಬಳಸುತ್ತಿದ್ದರೆ ಎಂದು ದೂರಿದ್ದಾರೆ.

ಮಾರಾಕಾಸ್ತ್ರ ಪತ್ತೆ:

ಮೊದಲ ಕಾರನ್ನು ಪರೀಕ್ಷಿಸಿದಾಗ ಢಿಕ್ಕಿಯಲ್ಲಿ ಮಾರಾಕಾಸ್ತ್ರಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಬಳಿಕ ಬೈಂದೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದ ಆರೋಪಿಗಳು ನೀವು ಭಟ್ಕಳಕ್ಕೆ ಬಂದರೆ ನೋಡಿಕೊಳ್ಳುತ್ತೇವೆ ಎಂದು ಸ್ಥಳೀಯರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next