ಬೆಂಗಳೂರು: ಭಾರತದ ಬಾಹ್ಯಾಕಾಶ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಮತ್ತೂಂದು ಮಹತ್ವದ ಸಾಧನೆಯಾಗಿದೆ. ಡಿಆರ್
ಡಿಒ ಅಭಿವೃದ್ಧಿಪಡಿಸಿದ ಉಪಗ್ರಹ ಪ್ರತಿರೋಧ ಕ್ಷಿಪಣಿ ಶತ್ರು ರಾಷ್ಟ್ರಗಳ ಉಪಗ್ರಹವೊಂದನ್ನು ಕೇವಲ ಮೂರು
ನಿಮಿಷದಲ್ಲಿ ನಾಶಪಡಿಸಿದೆ. ಈ ಉಪಗ್ರಹ ಭಾರತೀಯ ಸೇನಾ ನೆಲೆ, ರಕ್ಷಣಾ ವಲಯದ ಕೇಂದ್ರಗಳ ಮೇಲೆ ಕಣ್ಣಿಟ್ಟಿತ್ತು. ಆ ಮೂಲಕ ಅಂತರಿಕ್ಷದಲ್ಲೂ ಸರ್ಜಿಕಲ್ ಸ್ಟ್ರೈಕ್ ನಡೆದಿದೆ. “ಮಿಷನ್ ಶಕ್ತಿ’ ಕಾರ್ಯಾಚರಣೆ ನಡೆಸಿದ ಶ್ರೇಯ
ಡಿಆರ್‌ಡಿಒ ವಿಜ್ಞಾನಿಗಳಿಗೆ ಸಲ್ಲಬೇಕು ಎಂದು ಬಿಜೆಪಿ ವಕ್ತಾರ ಎಸ್.ಸುರೇಶ್ ಕುಮಾರ್ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಿಷನ್ ಶಕ್ತಿ’ ಕಾರ್ಯಾಚರಣೆ ಶ್ರೇಯಸ್ಸನ್ನು
ಪ್ರಧಾನಿ ನರೇಂದ್ರ ಮೋದಿಯವರು ಪಡೆಯಬಾರದು ಎಂಬು ದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸುರೇಶ್ ಕುಮಾರ್, ಪ್ರಧಾನಿ ಮೋದಿಯವರು “ಮಿಷನ್ ಶಕ್ತಿ’ ಕಾರ್ಯಾಚರಣೆಯ ಶ್ರೇಯಸ್ಸು ಡಿಆರ್‌ಡಿಒ ವಿಜ್ಞಾನಿಗಳಿಗೆ ಸಲ್ಲಬೇಕು ಎಂದು ಹೇಳಿದ್ದಾರೆ. ಈವರೆಗೆ ಸರ್ಜಿಕಲ್ ಸ್ಟ್ರೈಕ್‌ಗೆ ಸಾಕ್ಷ್ಯ ಕೇಳುತ್ತಿದ್ದವರು ಅಂತರಿಕ್ಷದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಗೆ ಸಾಕ್ಷ್ಯ ಕೇಳದಿರುವುದು ನಮ್ಮ ಪುಣ್ಯ ಎಂದು ವ್ಯಂಗ್ಯವಾಡಿದ್ದಾರೆ.
ಸಮ್ಮಿಶ್ರದ ದುಷ್ಟ ಜೋಡೆತ್ತುಗಳು: ಅಂಬರೀಶ್ ಅವರ ಸಾವಿನ ಸುದ್ದಿಯನ್ನೂ ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದಾರೆ. ವಿಧವೆಯೊಬ್ಬರು ಚುನಾವಣೆಗೆ ಸ್ಪರ್ಧಿಸಿರುವುದನ್ನು ಸಹಿಸದೆ ತೇಜೋವಧೆಗಿಳಿದಿರುವುದು ಖಂಡನೀಯವಲ್ಲ. ತಮಗೆ ಹೆದರಿಕೆ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೆ ಸುಮಲತಾ ಹೆಸರಿನ ಮೂವರು ಮಹಿಳೆಯರನ್ನು ಕಣಕ್ಕಿಳಿಸಲಾಗಿದೆ. ಸಮ್ಮಿಶ್ರ ಸರ್ಕಾರದ ದುಷ್ಟ ಜೋಡೆತ್ತುಗಳು ಚುನಾವಣಾ ಸಂಸ್ಕೃತಿಯನ್ನು ನಾಶಪಡಿಸದಂತೆ ತಡೆಯಲು ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಪರಿಷತ್ ಸದಸ್ಯೆ ತೇಜಸ್ವಿನಿ ಹೇಳಿದರು.