Advertisement
ಮೂಲತ್ವ ಫೌಂಡೇಶನ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಗರದ ಪುರಭವನದಲ್ಲಿ ಶನಿವಾರ ಮೂಲತ್ವ ವಿಶ್ವ ಪ್ರಶಸ್ತಿ – 2017 ಸೀÌಕರಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯ ಮಾನವ ಹಕ್ಕು ಆಯೋಗ ಸದಸ್ಯ ಸಿ.ಜಿ. ಹುನಗುಂದ ಮಾತನಾಡಿ, ಒಬ್ಬ ಮನುಷ್ಯ ಹಣದಿಂದ ಶ್ರೀಮಂತನಾಗಬಲ್ಲ. ಆದರೆ ಸಮಾಜ ಸೇವೆ, ಸಾಧನೆಯಿಂದ ಶ್ರೇಷ್ಠಧಿನಾಗಲು ಸಾಧ್ಯ. ಸಿಂಧುತಾಯಿಯಂತಹ ಶ್ರೇಷ್ಠ ವ್ಯಕ್ತಿತ್ವವನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಹೆಮ್ಮೆಯ ವಿಚಾರ ಎಂದರು.
Related Articles
ವಿಧಾನಪರಿಷತ್ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್ ಮಾತನಾಡಿ, ನಾನು ನನ್ನದು ಎನ್ನುವ ಭಾವನೆಯನ್ನು ಅಳಿಸಿ ಸಮಾಜದ ಉಳಿತಿಗಾಗಿ ದುಡಿದಾಗ ಸಿಗುವ ತೃಪ್ತಿ ಬೇರೆ ಎಲ್ಲಿಯೂ ಸಿಗದು. ಸಜ್ಜನರ ನಿಷ್ಕ್ರಿಯತೆ ದುರ್ಜನರ ಕ್ರಿಯಾಶೀಲತೆಗಿಂತ ಅಪಾಯಕಾರಿಯಾದುದು. ಈ ನಿಟ್ಟಿನಲ್ಲಿ ಸಜ್ಜನರು ನಿರಂತರ ಕ್ರಿಯಾಶೀಲರಾಗಿರಬೇಕಾದುದು ಅನಿಧಿವಾರ್ಯ ಎಂದರು.
Advertisement
ಮೂಲತ್ವ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪ್ರಕಾಶ್ ಅವರು ಪ್ರಸ್ತಾವನೆಗೈದು, ಬಡವರು, ನಿರ್ಗತಿಕರು, ಸಿಂಧು ತಾಯಿ ಅವರು ಅನಾಥ ಮಕ್ಕಳಿಗಾಗಿ ಮಾಡಿರುವ ನಿಸ್ವಾರ್ಥ ಸೇವೆಯ ಬಗ್ಗೆ ಜನರಿಗೆ ತಿಳಿಯಲಿ ಹಾಗೂ ಪ್ರೇರಣೆಧಿಯಾಗಲಿ ಎಂಬ ನಿಟ್ಟಿನಲ್ಲಿ ಅವರನ್ನು ಗೌರಧಿವಿಸಧಿಲಾಗುಧಿತ್ತಿದೆ. ಅಶಕ್ತರಿಗೆ ಶಕ್ತಿ ನೀಡುವ ನಿಟ್ಟಿಧಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಗುರಿಧಿಯನ್ನು ಫೌಂಡೇಶನ್ ಹೊಂದಿದೆ. ಈ ಬಗ್ಗೆ ಕಾರ್ಯಪ್ರವೃತ್ತಧಿರಾಗಲಿದ್ದೇವೆ ಎಂದರು.
ನಿವೃತ್ತ ಬ್ರಿಗೇಡಿಯರ್ ಐ.ಎನ್. ರೈ, ಲೆಫ್ಟಿನೆಂಟ್ ಇಸಾನ್, ಭಾಗವತರು, ಯಕ್ಷಧ್ರುವ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಪ್ಯಾರಾಧಿಮಿಲಿಟರಿಯ ಅಹಲ್ಯಾ, ರೋಶನಿ ನಿಲಯದ ಪ್ರೊಫೆಸರ್ ವಿನುತಾ ರೈ, ಫೌಂಡೇಶನ್ ಟ್ರಸ್ಟಿ ಕಲ್ಪನಾ ಕೋಟ್ಯಾನ್, ಶೈನಿ ಡಿ’ಸೋಜಾ, ಮೂಲತ್ವ ಪ್ರಶಸ್ತಿ ಸಂಚಾಲಕ ಪುರುಷೋತ್ತಮ ಚಿತ್ರಾಪುರ, ಕಾರ್ಯದರ್ಶಿ ಜೀತೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಪ್ರೊ| ರಾಜ್‌ಮೋಹನ್ ರಾವ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ
ಮನೆ, ಕುಟುಂಬದವರಿಂದ ದೂರವಾಗಿ ರಸ್ತೆಯಲ್ಲಿ ಹಾಡು ಹಾಡಿ ಹೊಟ್ಟೆ ತುಂಬಿಸಿಧಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ. ಆದರೆ ನನ್ನಿಂದ ಸಮಾಜ ಸೇವೆ ಆಗಬೇಕು ಎಂದು ದೇವರು ನಿರೀಕ್ಷಿಸಿದ್ದ; ಹಾಗಾಗಿ ಬದುಕಿಸಿದ. ನಾನು ಎಂದಿಗೂ ಪ್ರಶಸ್ತಿಗಳನ್ನು ಬಯಸಿರಲಿಲ್ಲ. ಆದರೆ ಸೇವೆ ಮಾಡಲೇಬೇಕು ಎಂದು ಹಠ ತೊಟ್ಟಿದ್ದೆ. ಪ್ರಶಸ್ತಿಗಳು ನನ್ನನ್ನು ಅರಸಿ ಬಂದವು.