Advertisement

ನಿವೇಶನ ಮಾರಾಟ ದಂಧೆಗೆ ಕಡಿವಾಣ ಅಗತ್ಯ

03:52 PM Jan 06, 2017 | Team Udayavani |

ಕಾರಟಗಿ: ಸರಕಾರಿ ಸ್ವಾಮ್ಯದ ನಿವೇಶನಗಳನ್ನು ಮಾರಾಟ ಮಾಡುವ ದಂಧೆ ಕುರಿತು ದೂರುಗಳಿದ್ದು, ಕಡಿವಾಣ ಅಗತ್ಯವಿದೆ. ನಿರ್ಲಕ್ಷé ವಹಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ನಗರಾಭಿವೃದ್ಧಿ ಯೋಜನಾ ನಿರ್ದೇಶಕ ವಿಜಯಕುಮಾರ ಎಚ್ಚರಿಸಿದರು. 

Advertisement

ಪಟ್ಟಣದಲ್ಲಿ ವಿವಿಧ ವಾರ್ಡ್‌ಗಳಲ್ಲಿ ಕಾಮಗಾರಿ ಕೈಗೊಳ್ಳಲು ಟೆಂಡರ್‌ ನಿಗದಿಯಾಗಿ ಕರೆ ನೀಡಿದ್ದು ವಾಡ್‌ ìಗಳಲ್ಲಿ ಕಾಮಗಾರಿ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಪುರಸಭೆಯ 17ಕ್ಕೂ ಹೆಚ್ಚು ಸದಸ್ಯರು ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣಾ ಪತ್ರ ಸಲ್ಲಿಸಿದ ಕುರಿತು ಅವರು ಸದಸ್ಯರೊಂದಿಗೆ ಸಭೆ ನಡೆಸಿ ಮಾತನಾಡಿದರು. 

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪುರಸಭೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಪುರಸಭೆಗೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳ ತೀರ್ಮಾನವೇ ಅಂತಿಮ. ಒಂದು ಸಲ ಕ್ರಿಯಾ ಯೋಜನೆ ರೂಪಿಸಿದ ಮೇಲೆ ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸದಸ್ಯರು ಮೊದಲು ನಿಮ್ಮ ವಾರ್ಡಿನಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಪುರಸಭೆ ಒಂದು ಕುಟುಂಬ ಇದ್ದ ಹಾಗೆ. ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಹೋಗಿ ಎಂದು ಸದಸ್ಯರಿಗೆ ಸಲಹೆ ನೀಡಿದರು. 

ಸೂಕ್ತ ಕ್ರಮಕ್ಕೆ ಆದೇಶ: ಪಟ್ಟಣದ ಬಸವೇಶ್ವರನಗರ,  ರಾಜೀವಗಾಂಧಿನಗರ, ರಾಮನಗರ ಸೇರಿದಂತೆ ಸರಕಾರ ಜಮೀನಿನ ಪ್ಲಾಟ್‌ಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಇದರ ಜೊತೆಗೆ ಗೋಮಾಳದ ನಿವೇಶನಗಳನ್ನು ನೀಡಿದ್ದು ಇಂಥ ನಿವೇಶನಗಳನ್ನು ಮಾರಾಟ ಮಾಡುವ ದಂಧೆ ಹೆಚ್ಚಾಗಿದೆ ಎಂದು ಕೆಲ ಸದಸ್ಯರು ಸಭೆಯ ಗಮನಕ್ಕೆ ತಂದರು. 

Advertisement

ಹಿಂದಿನ ಪಂಚಾಯಿತಿ ಆಡಳಿತದಲ್ಲಿ ಈ ದಂಧೆ ಹೆಚ್ಚಾಗಿತ್ತು. ಎಲ್ಲವನ್ನು ಪರಿಶೀಲಿಸಿ ವರ್ಗಾವಣೆ ಮಾಡಲು ಅವಕಾಶ ಕೊಟ್ಟ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡುವಂತೆ ನಿರ್ದೇಶಕ ವಿಜಯಕುಮಾರ ಸೂಚಿಸಿದರು. ಸಭೆಯಲ್ಲಿ ಅಧ್ಯಕ್ಷೆ ಅನ್ನಪೂರ್ಣಮ್ಮ ಬೂದಿ, ಉಪಾಧ್ಯಕ್ಷೆ ಮಹಾದೇವಿ ಭಜಂತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಈಶಪ್ಪ, ಮುಖ್ಯಾಧಿಕಾರಿ ಡಾ| ಎನ್‌.ಶಿವಲಿಂಗಪ್ಪ ಸೇರಿದಂತೆ ಸದಸ್ಯರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next