Advertisement
ಕೆರ್ನಡ್ಕ ನಿವಾಸಿ ಕೆ. ಗೋಪಾಲನ್ ಅವರ ಪತ್ನಿ, ಕೊರಮೇರು ಅಂಗನವಾಡಿ ಕೇಂದ್ರದ ನಿವೃತ್ತ ಸಹಾಯಕಿಯಾಗಿರುವ ಸಾವಿತ್ರಿ (62) ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಪುತ್ತೂರಿನ ಆಸ್ಪತ್ರೆಗೆ ದಿನ ಬಿಟ್ಟು ದಿನ ಡಯಾಲಿಸಿಸ್‌ಗೆ ಹೋಗ ಬೇಕಾಗಿದೆ. ಅವರ ಮನೆಗೆ ಹೋಗಲು ರಸ್ತೆ ಇಲ್ಲ. ಡಾಮರು ರಸ್ತೆಯ ಕೆರ್ನಡ್ಕದಿಂದ ಅವರ ಮನೆ 250 ಮೀ. ದೂರದಲ್ಲಿದೆ. 100 ಮೀ. ಸಂಚಾರಕ್ಕೆ ಮಣ್ಣಿನ ರಸ್ತೆಯಿದ್ದು ಅಲ್ಲಿಂದ 150 ಮೀ. ಕಾಲು ದಾರಿಯಲ್ಲಿ ಸಾಗಬೇಕು. ಎರಡೂ ಬದಿ ಖಾಸಗಿಯವರ ತೋಟವಿದೆ. ಅಲ್ಲಿ ವಾಹನ ಸಂಚಾರಕ್ಕೆ ಬೇಕಾದಷ್ಟು ರಸ್ತೆ ಇಲ್ಲದೇ ಇರುವುದರಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಾವಿತ್ರಿ ಅವರನ್ನು ಅವರ ಮಗ ಸತೀಶ್ ಅಸುಪಾಸಿನವರ ಸಹಕಾರದೊಂದಿಗೆ ಹೊತ್ತುಕೊಂಡೇ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ.
Advertisement
ಅನಾರೋಗ್ಯ ಪೀಡಿತೆಯನ್ನು ಹೊತ್ತೂಯ್ಯುವ ಅನಿವಾರ್ಯ!
12:44 AM Jul 29, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.