Advertisement

ಏರ್ಯರ ಸಮಗ್ರ ಸಾಹಿತ್ಯ ಸಂಪುಟ ಹೊರತರುವ ಕಾರ್ಯ ಅಗತ್ಯ: ಡಾ|ವಿವೇಕ ರೈ

11:40 PM Apr 02, 2023 | Team Udayavani |

ಬಂಟ್ವಾಳ: ಜನಪದ, ಸಾಹಿತ್ಯ, ಸಂಘಟನೆ ಹೀಗೆ ಸರ್ವ ಕ್ಷೇತ್ರದಲ್ಲೂ ತೊಡಗಿಕೊಂಡ ಸಾಹಿತಿ ಏರ್ಯ ಅವರು ಮಾನವತವಾದದ ಇಡೀ ರೂಪವಾಗಿದ್ದು, ಸಾಹಿತ್ಯ ಕೃಷಿಯನ್ನು ತನ್ನ ಬದುಕಿನ ಜೀವಧಾತುವಾಗಿ ಬಳಸಿಕೊಂಡಿದ್ದರು. ಮುಂದಿನ ಮೂರು ವರ್ಷಗಳಲ್ಲಿ ಅವರ ಜನ್ಮ ಶತಮಾನೋತ್ಸವ ಆಚರಿಸುವ ಸುಸಂ ದರ್ಭವಿದ್ದು, ಆ ವೇಳೆ ಏರ್ಯರ ಸಮಗ್ರ ಸಾಹಿತ್ಯ ಸಂಪುಟವನ್ನು ಹೊರತರುವ ಕೆಲಸವಾಗಬೇಕು ಎಂದು ಹಂಪಿ ಕನ್ನಡ ವಿವಿಯ ನಿವೃತ್ತ ಕುಲಪತಿ ಡಾ| ಬಿ.ಎ.ವಿವೇಕ ರೈ ಹೇಳಿದರು.

Advertisement

ಅವರ ರವಿವಾರ ಬಿ.ಸಿ.ರೋಡು ಬಳಿಯ ಏರ್ಯ ಬೀಡಿನಲ್ಲಿ ಏರ್ಯ ಆಳ್ವ ಫೌಂಡೇಶನ್‌ ಆಶ್ರಯದಲ್ಲಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಕೃತಿಗಳಲ್ಲಿ ಮುಖ್ಯವಾದವುಗಳನ್ನು ಮಥಿಸುವ ಮತ್ತು ಏರ್ಯರ ಕವನಗಳನ್ನು ಹಾಡುವ ಏರ್ಯ ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಏರ್ಯರ ಪತ್ನಿ ಆನಂದಿ ಆಳ್ವ ಅವರು ಡಾ| ವಿವೇಕ ರೈ ಅವರನ್ನು ಗೌರವಿಸಿದರು. ಬಳಿಕ ಹಿರಿಯ ಸಾಹಿತಿಗಳಾದ ಡಾ| ತಾಳ್ತಜೆ ವಸಂತಕುಮಾರ್‌, ಡಾ| ನಾ.ದಾಮೋದರ ಶೆಟ್ಟಿ, ಪ್ರೊ| ಪಿ.ಕೃಷ್ಣಮೂರ್ತಿ, ಡಾ| ಯು. ಮಹೇಶ್ವರಿ, ಡಾ| ತುಕಾರಾಮ್‌ ಪೂಜಾರಿ, ಡಾ| ಸತ್ಯನಾರಾ ಯಣ ಮಲ್ಲಿಪಟ್ಟಣ, ಡಾ| ಆರ್‌.ನರಸಿಂಹ ಮೂರ್ತಿ, ಡಾ| ಅರುಣಕುಮಾರ್‌ ಎಸ್‌.ಆರ್‌. ಅವರು ಕೃತಿ ವಿಶ್ಲೇಷಣೆ ಹಾಗೂ ಕಿಶೋರ್‌ ಪೆರ್ಲ ಅವರು ಗಾಯನ ನಡೆಸಿಕೊಟ್ಟರು.

ಏರ್ಯರ ಪುತ್ರಿ ಸುಖಧಾ ಬಾಲಕೃಷ್ಣ ಹೆಗ್ಡೆ, ಮೊಮ್ಮಗಳು ಭಕ್ತಿ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಅಳಿಯ ಬಾಲಕೃಷ್ಣ ಹೆಗ್ಡೆ ಸ್ವಾಗತಿಸಿದರು. ನಿವೃತ್ತ ಪ್ರಾಧ್ಯಾಪಕ ಮಹಾಬಲೇಶ್ವರ ಹೆಬ್ಟಾರ್‌ ಹಾಗೂ ಕೇಶವ ಎಚ್‌. ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next