ಸೋಮವಾರ ಪ್ರಾರಂಭಗೊಂಡ ಮೇಕ್ ಇನ್ ಇಂಡಿಯಾ-ಕರ್ನಾಟಕ ಸಮ್ಮೇಳನದಲ್ಲಿ “ವೈಮಾನಿಕ ಮತ್ತು ರಕ್ಷಣಾ ವಲಯ’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಉದ್ಯಮಿಗಳು, “”ಯಾವುದೇ ಕ್ಷೇತ್ರದ ಉತ್ಪನ್ನಗಳು ನಮ್ಮಲ್ಲಿಗೆ ಮಾತ್ರ ಸೀಮಿತವಾಗದೇ ಜಾಗತಿಕ ಮಾರುಕಟ್ಟೆ ಪ್ರವೇಶಿಸಬೇಕು. ದೇಶೀಯ ಉತ್ಪನ್ನಗಳು ಯಶಸ್ವಿಯಾಗಬೇಕಾದರೆ ವಿಶ್ವಮಟ್ಟಕ್ಕೆ ತಲುಪಬೇಕು. ಆಗ ಮಾತ್ರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಮೌಲ್ಯ ಸಿಗಲಿದೆ,” ಎಂದು ಪ್ರತಿಪಾದಿಸಿದರು.
Advertisement
ಭರತ್ ಫೋರ್ಜ್ ಲಿ.ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಬಾಬಾ ಕಲ್ಯಾಣಿ ಮಾತನಾಡಿ, “ತಂತ್ರಜ್ಞಾನಗಳ ಬಳಕೆಯಲ್ಲಿ ಬದಲಾವಣೆಗಳಾಗುತ್ತಿವೆ. ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ವೈಮಾನಿಕ ಮತ್ತು ರಕ್ಷಣಾ ವಲಯ ಸದೃಢಗೊಳಲು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಅಗತ್ಯವಿದೆ. ತಂತ್ರಜ್ಞಾನಗಳ ಅಳವಡಿಕೆಯಲ್ಲಿ ತಡವಾಗಬಾರದು. ಇದಕ್ಕೆ ಯಾವುದೇ ರೀತಿಯಲ್ಲಿಯೂ ವಿನಾಯಿತಿ ನೀಡಲು ಸಾಧ್ಯವಿಲ್ಲ. ನಾವು ತಡ ಮಾಡಿದರೆ ಮತ್ತೂಂದು ರಾಷ್ಟ್ರ ಅದನ್ನು ಅಳವಡಿಸಿಕೊಂಡು ಮುನ್ನಡೆಯುತ್ತದೆ,” ಎಂದು ಹೇಳಿದರು.
ಬೆಂಗಳೂರು: “ಆರೋಗ್ಯ, ಜೈವಿಕ ತಂತ್ರಜ್ಞಾನ ಮತ್ತು ಔಷಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ನಿಮ್ಹಾನ್ಸ್, ಐಐಎಸ್‌ಸಿಯಂತಹ ಮೇರು ಸಂಶೋಧನಾ ಕೇಂದ್ರಗಳಿವೆ. ಹೀಗಾಗಿ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಉದ್ಯಮಿಗಳಿಗೆ ಅನುಕೂಲವೇ ಹೆಚ್ಚು. ಅಲ್ಲದೇ, ಹೊಸ ಹೊಸ ಅವಿಷ್ಕಾರಕ್ಕೆ ಉತ್ತೇಜನ ನೀಡಿದಂತಾಗುತ್ತದೆ,” ಎಂದು ,” ಎಂದು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಅಭಿಪ್ರಾಯಪಟ್ಟಿದ್ದಾರೆ.