Advertisement

ಕೋವಿಡ್ ಜೊತೆ ಬಾಳುವುದು ಅನಿವಾರ್ಯ

03:56 PM Jun 28, 2020 | Suhan S |

ತಾವರಗೇರಾ: ತಜ್ಞರ ಪ್ರಕಾರ ಕೋವಿಡ್ ವೈರಸ್‌ ದೀರ್ಘ‌ಕಾಲ ಇರುತ್ತದೆ. ಆದ್ದರಿಂದ ಅದರ ಜೊತೆಗೆ ಬಾಳುವುದು ಅನಿವಾರ್ಯವಾಗಿದೆ. ವೈರಸ್‌ ಬಗ್ಗೆ ಸಾರ್ವಜನಿಕರು ಯಾವುದೇ ಭಯಪಡದೇ ಸಾಮಾಜಿಕ ಅಂತರ ಕಾಯ್ದುಕೊಂಡು ಹೋಗಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್‌ ಬಯ್ನಾಪೂರ ಹೇಳಿದರು.

Advertisement

ಪಟ್ಟಣದ ಸಮುದಾಯ ಆರೊಗ್ಯ ಕೇಂದ್ರದ ಐವರು ಸಿಬ್ಬಂದಿಗೆ ಶುಕ್ರವಾರ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದ ಸೀಲ್‌ ಡೌನ್‌ ಪ್ರದೇಶದಲ್ಲಿ ಹೋಂ ಕ್ವಾರಂಟೈನ್‌ ನಲ್ಲಿರುವ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರ ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕಠಿಣ ಕ್ರಮ ಕೈಗೊಂಡಿದೆ. ಇಲಾಖೆ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಕೂಡ ಸಹಕಾರ ನೀಡಬೇಕು. ಮದುವೆ ಹಾಗು ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಜನ ಸೇರದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಸರ್ಕಾರವು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುತ್ತಿರುವುದು ಸ್ವಾಗತಾರ್ಹ ನಿಲುವಾಗಿದೆ, ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಒಳ್ಳೆಯ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು. ನಂತರ ಇಲ್ಲಿಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಪಿಎಸ್‌ಐ ಗೀತಾಂಜಲಿ ಶಿಂಧೆ, ಪಪಂ ಮುಖ್ಯಾ ಧಿಕಾರಿ ಶಂಕರ್‌ ಕಾಳೆ, ಪಪಂ ಆರೋಗ್ಯಾಧಿಕಾರಿ ಪ್ರಾಣೇಶ ಬಳ್ಳಾರಿ, ಪಪಂ ಸದಸ್ಯರಾದ ನಾರಾಯಣಗೌಡ ಮೆದಿಕೇರಿ, ಚಂದ್ರಶೇಖರ ನಾಲತವಾಡ, ಅಮರೇಶ ಗಾಂಜಿ, ವಿಕ್ರಮ್‌ ರಾಯ್ಕರ್‌, ವೀರನಗೌಡ ಪಾಟೀಲ್‌, ಅಯೂಬ್‌ ಖಾನ್‌, ನಿವೃತ್ತ ಸೈನಿಕ ಹಂಪನಗೌಡ ಬಳೂಟಗಿ, ರುದ್ರಗೌಡ ಕುಲಕರ್ಣಿ, ಯಂಕನಗೌಡ ವಿಠಲಾಪೂರ ಹಾಗೂ ಪಪಂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next