Advertisement

Yatnal ಸೇರಿ ಬಿಜೆಪಿ ಮುಖಂಡರಿಂದ ಧರ್ಮ ಸಹಿಷ್ಣುತೆ ನಿರೀಕ್ಷೆ ಅಸಾಧ್ಯ: ಯತ್ರೀಂದ್ರ

07:44 PM Dec 08, 2023 | Team Udayavani |

ಗಂಗಾವತಿ: ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಸೇರಿ ಬಿಜೆಪಿ ಮುಖಂಡರಿಂದ ಜಾತಿ, ಧರ್ಮ ಸಹಿಷ್ಣುತೆ ನಿರೀಕ್ಷಿಸುವುದು ಅಸಾಧ್ಯ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸ್ಲಿಂ ಧರ್ಮ ಗುರುಗಳ ಕಾರ್ಯಕ್ರಮದಲ್ಲಿ ಮೌಲ್ವಿಗಳ ಪಕ್ಕದಲ್ಲಿ ಕುಳಿತುಕೊಂಡದ್ದನ್ನು ಶಾಸಕ ಯತ್ನಾಳ ಉಗ್ರವಾದಿಗಳಿಗೆ ಹೋಲಿಕೆ ಮಾಡುವುದು ಎಷ್ಟು ಸರಿ ಎಂದು ವರುಣಾ ಕ್ಷೇತ್ರದ ಆಶ್ರಯ ಕಮಿಟಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ಯತ್ರೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಅವರು ಸಿಂಧನೂರಿಗೆ ಹೋಗುವ ಮಾರ್ಗ ಮಧ್ಯೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಿವಾಸದಲ್ಲಿ ಉದಯವಾಣಿ ಜೊತೆ ಮಾತನಾಡಿ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಸೇರಿ ಬಿಜೆಪಿ ಮುಖಂಡರು ಜಾತಿ ಧರ್ಮದ ಆಧಾರದಲ್ಲಿ ಅಧಿಕಾರಗಳನ್ನು ಪಡೆದುಕೊಂಡಿದ್ದಾರೆ ಅವರಿಂದ ಧರ್ಮ ಸಹಿಷ್ಣತೆ ನಿರೀಕ್ಷಿಸುವುದು ಅಸಾಧ್ಯ ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪದೇ ಪದೇ ಮುಸ್ಲಿಮರು ಒಂದೇ ಮುಸ್ಲಿಮರ ಜತೆ ಹೋಲಿಕೆ ಮಾಡಲು ಯತ್ನಿಸುತ್ತಿದ್ದಾರೆ.

ಮುಸ್ಲಿಂ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳು ಮುಸ್ಲಿಂ ಸಮಾಜದ ಹಿತವನ್ನು ಇತರ ಸಮಾಜಗಳ ಹಿತದಂತೆ ಸಂರಕ್ಷಣೆ ಮಾಡಲಾಗುತ್ತದೆ ಎಂದಿರುವ ವಿಷಯವನ್ನು ಅಪರಾಧ ಎನ್ನುವಂತೆ ಬಿಂಬಿಸುವುದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ವೇದಿಕೆ ಹಂಚಿಕೊಂಡಿರುವ ಮೌಲ್ವಿಯೊಬ್ಬರು ಐ ಎಸ್ ಐ ಎಸ್ ಉಗ್ರರ ಜೊತೆ ಸಂಪರ್ಕದಲ್ಲಿದ್ದು ಇಂತವರೊಂದಿಗೆ ಸಿದ್ದರಾಮಯ್ಯ ಕುಳಿತುಕೊಂಡಿದ್ದಾರೆ. ಬಾಲಿಶವಾದ ಹೇಳಿಕೆ ನೀಡಿದ್ದು ಯತ್ನಾಳ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಅದಕ್ಕೆ ಮಾಧ್ಯಮದವರು ಹೆಚ್ಚು ಹೊತ್ತು ಕೊಡಬಾರದು. ಕನ್ನಡ ನಾಡು ಶಾಂತಿ ಸೌಹಾರ್ದತೆ ಜಾತ್ಯತೀತತೆ ಹೆಸರಾಗಿದೆ ಸರ್ವರು ಅದನ್ನು ಉಳಿಸಿಕೊಂಡು ಹೋಗಲು ಯತ್ನಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ವ ಜನರ ಏಳಿಗೆಗಾಗಿ ಇರುವ ಶಕ್ತಿಯಾಗಿದ್ದಾರೆ ಅವರನ್ನು ಪದೇ ಪದೇ ಮುಸ್ಲಿಂ ತುಷ್ಟೀಕರಣದ ದೃಷ್ಟಿಯಲ್ಲಿ ಬಿಜೆಪಿ ಸಂಘ ಪರಿವಾರದ ಮುಖಂಡರು ನೋಡುತ್ತಿರುವುದು ಖಂಡನೀಯವಾಗಿದೆ.

ಸಂವಿಧಾನದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಅವಕಾಶಗಳನ್ನು ಕಲ್ಪಿಸಲು ಸೂಚನೆ ನೀಡಲಾಗಿದೆ. ಈ ದೇಶ ಜಾತ್ಯತೀತ ದೇಶ ಯಾವುದೇ ಜಾತಿ ಧರ್ಮದ ಪ್ರೇರಣೆಯಿಂದ ಈ ದೇಶ ಇಲ್ಲ ಆದ್ದರಿಂದ ಜನತೆ ಯತ್ನಾಳ್ ಅವರ ಹೇಳಿಕೆಯನ್ನು ಖಂಡಿಸಬೇಕು. ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಗೂ ಮುಂಚೆ ನೀಡಿದ್ದ ಭರವಸೆಯಂತೆ ಈಗಾಗಲೇ ನಾಲ್ಕು ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡಲಾಗಿದೆ. ಜನವರಿಯಲ್ಲಿ ಯುವನಿಧಿ ಗ್ಯಾರಂಟಿಯನ್ನು ಅನುಷ್ಠಾನ ಮಾಡಲಾಗುತ್ತದೆ.

Advertisement

ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರು ಆಗಿದ್ದು ಅವರು ಹಾಗೂ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತೀರ್ಮಾನಿಸಲಾಗುತ್ತದೆ.

ಬಿಜೆಪಿ ಈ ದೇಶದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಜನರನ್ನು ಹೊಡೆದು ಆಳಲು ಇಷ್ಟಪಡುತ್ತದೆ. ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಹಾಗೂ ಸಮಗ್ರತೆಯ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಇತ್ತೀಚಿನ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರದ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದು ದಕ್ಷಿಣದ ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸನ್ನು ಜನರು ಅಧಿಕಾರಕ್ಕೆ ತಂದಿದ್ದಾರೆ. ಈ ಚುನಾವಣೆ ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಲ್ಲ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ವಿಷಯಗಳು ಬೇರೆ ಬೇರೆ ಆಗಿರುತ್ತದೆ. ಬಿಜೆಪಿಗೆ ಆಡಳಿತಕ್ಕೆ ಜನರು ರೋಶಿ ಹೋಗಿದ್ದಾರೆ. ಬೆಲೆ ಏರಿಕೆ ಸೇರಿದಂತೆ ಜನಸಾಮಾನ್ಯರ ಜೀವನ ಕಷ್ಟವಾಗಿದೆ. ಆದ್ದರಿಂದ ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬುದ್ದಿ ಕಲಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು,ಕಾಂಗ್ರೆಸ್ ಮುಖಂಡರಾದ ರಾಮಕೃಷ್ಣ ರೊಳ್ಳಿ, ಕೆ.ರಾಜಶೇಖರ್ ಹಿಟ್ನಾಳ್, ಅಕ್ತರ್ ಅನ್ಸಾರಿ, ಇಮ್ತೀಯಾಜ್ ಅನ್ಸಾರಿ, ಜುಬೇರ್ ಸಣ್ಣಕ್ಕಿನೀಲಪ್ಪ, ರುದ್ರೇಶ ರ‍್ಹಾಳ, ನವಲಿ ಯಮನಪ್ಪ, ಮೋರಿ ದುರುಗಪ್ಪ, ನೀಲಕಂಠಪ್ಪ, ಗಡ್ಡಿ ಬಸವರಾಜ, ಜೆ.ಬಿ. ಲಕ್ಷ್ಮಣಗೌಡ, ಸನ್ನಿಕ್, ಅಶೋಕ್ ಗೌಡ, ಗದ್ವಾಲ್ ಕಾಸಿಂಸಾಬ್, ಜವಳಗೇರಿ ಹುಸೇನಪೀರಾ, ಆಯೂಬ್ ಖಾನ್, ಕಮಲಪಾಷಾ, ಕೊತ್ವಾಲ್ ನಾಗರಾಜ, ಪರಗಿ ಪ್ರಲ್ಹಾದ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next