Advertisement

ಹಳ್ಳಿ ಉದ್ಧಾರವಾಗದೇ ಅಭಿವೃದ್ಧಿ ಅಸಾಧ್ಯ

04:11 PM May 12, 2019 | Team Udayavani |

ಗದಗ: ನವದೆಹಲಿಯ ಕ್ವಾಲಿಟಿ ಕೌನ್ಸಿಲ್ ಆಫ್‌ ಇಂಡಿಯಾ ಹಾಗೂ ಬೆಂಗಳೂರು ಫೌಂಡೇಶನ್‌ ಫಾರ್‌ ಕ್ವಾಲಿಟಿ ಇಂಡಿಯಾ ಸಹಭಾಗಿತ್ವದಲ್ಲಿ ನಗರದ ರೈತ ಭವನದಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯದ ಸ್ಮಾರ್ಟ್‌ ಗ್ರಾಮಗಳನ್ನು ಗುರುತಿಸುವ ಕುರಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಗ್ರಾವಿವಿ ಕುಲಪತಿ ಪ್ರೊ| ಬಿ. ತಿಮ್ಮೇಗೌಡ ಮಾತನಾಡಿ, ಭಾರತದ ಆತ್ಮವಾದ ಹಳ್ಳಿಗಳ ಉದ್ಧಾರವಾಗದೇ ದೇಶದ ಅಭಿವೃದ್ಧಿ ಅಸಾಧ್ಯ ಎಂಬ ಗಾಂಧಿಧೀಜಿ ಅವರ ಹೇಳಿಕೆ ಪುನರುಚ್ಛರಿಸಿದರು. ಗ್ರಾಮೀಣಾಭಿವೃದ್ಧಿಯಲ್ಲಿ ಸ್ಥಳೀಯ ಸರಕಾರದ ಪ್ರಾಮುಖ್ಯತೆ, ಆಡಳಿತ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಅಭಿವೃದ್ಧಿ ಕಾರ್ಯಗಳ ವಸ್ತುನಿಷ್ಠೆ ಮೌಲ್ಯಮಾಪನದ ಅಗತ್ಯತೆ ಕುರಿತು ವಿವರಿಸಿ, ಎಲ್ಲ ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕುಲಸಚಿವ ಡಾ| ಪ್ರೊ| ಸುರೇಶ ನಾಡಗೌಡರ ಮಾತನಾಡಿ, ಗ್ರಾಮೀಣ ಭಾರತವನ್ನು ಕಲ್ಯಾಣ ಭಾರತವನ್ನಾಗಿಸುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ‘ಆದರ್ಶ ಗ್ರಾಮ’ದ ಪರಿಕಲ್ಪನೆ ಸಾಕಾರಗೊಳಿಸಬೇಕು ಎಂದರು.

ಕ್ವಾಲಿಟಿ ಕೌನ್ಸಿಲ್ ಆಫ್‌ ಇಂಡಿಯಾದ ಡಾ| ವೆಂಕಟೇಶ್‌ ತುಪ್ಪಿಲ್ ಮಾತನಾಡಿ, ಗ್ರಾಮೀಣಾ ಭಿವೃದ್ಧಿಯ ವಿಕೇಂದ್ರಿಕರಣ ತತ್ವದ ಹಿನ್ನೆಲೆಯಲ್ಲಿ ವಿವರಿಸಿದ ಅವರು, ಅಭಿವೃದ್ಧಿ ಪ್ರಕ್ರಿಯೆ ಕೆಳಹಂತದಿಂದ ಪ್ರಾರಂಭವಾಗಬೇಕು. ಜತೆಗೆ ಅಬ್ದುಲ್ ಕಲಾಂ ಅವರ ಕನಸಾದ ಸ್ಮಾರ್ಟ್‌ ಗ್ರಾಮಗಳ ಮಾದರಿ ಸಾಕಾರಗೊಳ್ಳಬೇಕಿದೆ ಎಂದು ಹೇಳಿದರು.

ಕ್ವಾಲಿಟಿ ಕೌನ್ಸಿಲ್ ಆಫ್‌ ಇಂಡಿಯಾ ಸದ್ಯಸ ಕೆ.ವಿ. ರವೀಂದ್ರನಾಥ್‌ ಟಾಗೋರ್‌ ಮಾತನಾಡಿ, ಕೇಂದ್ರ ಮತ್ತು ರಾಜ್ಯದ ಯೋಜನೆಗಳು ಇನ್ನೂ ಗ್ರಾಮೀಣ ಜನರಿಗೆ ತಲುಪಿಲ್ಲ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

Advertisement

ಡಾ| ಕವಿತಾ ಬೇವಿನಮರ, ಬಸನಗೌಡ, ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next