ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಬಿಜೆಪಿ, ತಾವು (ಡಿ.ಕೆ.ಶಿವಕುಮಾರ್) ಜೈಲಿಗೆ ಹೋಗಿದ್ದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಅಲ್ಲ; ಅದೇ ಭ್ರಷ್ಟಾಚಾರದಿಂದ. ಭ್ರಷ್ಟಾಚಾರದ ಬಗ್ಗೆ ಖುದ್ದು ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ ಎಂದು ವ್ಯಂಗ್ಯವಾಡಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ತಾನೇ ಚಾಣಕ್ಯ ಎಂಬ ಭ್ರಮೆಯಲ್ಲಿದ್ದ ಡಿ.ಕೆ.ಶಿವಕುಮಾರ್ ಅವರು 20 ಬ್ಯಾಂಕಿನಲ್ಲಿ 200 ಕೋಟಿ ರೂ. ಹೂತಿಟ್ಟಿದ್ದು, ನಿಮ್ಮ ಆದಾಯ 800 ಪಟ್ಟು ಹೆಚ್ಚಾಗಿರುವುದು ಭ್ರಷ್ಟಾಚಾರದಿಂದ ಎಂದು ಹೇಳಿದೆ.
ನಿಮ್ಮ ವಿರೋಧಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ, ಬೆಂಗಳೂರಿಗರ ಸೂರಿನ ಕನಸಿಗೆ ಕನ್ನ ಕೊರೆದು, 943 ಎಕರೆಯ ಅರ್ಕಾವತಿ ಡಿ-ನೋಟಿಫಿಕೇಷನ್ ಮಾಡಿ, ಪ್ರಕರಣ ತಮ್ಮ ಕಡೆ ತಿರುಗಿದಾಗ ಕಡತಗಳನ್ನೇ ಎಗರಿಸಿದ್ದು ಇದೇ ಸಿದ್ದರಾಮಯ್ಯನವರ ಭ್ರಷ್ಟ ಕೈಗಳೇ ಎಂದು ಹೇಳಿದೆ.