ಹೊಸಕೋಟೆ: ಇಡೀ ವಿಶ್ವಕ್ಕೆ ಮಾದರಿಯಾಗಿರುವ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದುಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಶ್ರೀಮಾತಾಶಾರದ ಆಶ್ರಮದ ಅಧ್ಯಕ್ಷೆ ಮಾತಾ ಬ್ರಹ್ಮಮಯಿ ಹೇಳಿದರು.
ನಗರದ ವಿವೇಕಾನಂದ ವಿದ್ಯಾ ಕೇಂದ್ರದಲ್ಲಿತಾಲೂಕು ಯುವ ಬ್ರಿಗೇಡ್ ಹಾಗೂ ಸೋದರಿನಿವೇದಿತಾ ಪ್ರತಿಷ್ಠಾನದ ವತಿಯಿಂದ ನಡೆದ “ಅಮ್ಮನಮನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಯುವಕರಿಗೆ ಸಂಸ್ಕಾರ ನೀಡಿದರೆ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವಿದೆ.
ಭಾರತೀಯ ಸಂಸ್ಕೃತಿಯಲ್ಲಿ ಜನ್ಮ ನೀಡಿದ ತಾಯಿಗೆಅತ್ಯುನ್ನತ ಸ್ಥಾನ ನೀಡಲಾಗಿದೆ. ಮಕ್ಕಳ ಶಾರೀರಿಕಬೆಳವಣಿಗೆಯೊಂದಿಗೆ ಉತ್ತಮ ಸಂಸ್ಕಾರನೀಡುವಲ್ಲಿ ತಾಯಿಯು ಪ್ರಮುಖ ಪಾತ್ರವಹಿಸುತ್ತಿದ್ದಾಳೆ ಎಂದರು.
ಸೂಕ್ತ ಮಾರ್ಗದರ್ಶನ ನೀಡಿ: ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಹೆಚ್ಚಾಗುತ್ತಿದೆ. ಬಹಳಷ್ಟು ಯುವಕ-ಯುವತಿಯರು ವಸ್ತ್ರ ಸಂಹಿತೆ ಪಾಲಿಸುವ ಬಗ್ಗೆನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇಂತಹಪರಿಸ್ಥಿತಿಯಲ್ಲಿ ಪೋಷಕರು ಸೂಕ್ತ ಮಾರ್ಗದರ್ಶನನೀಡಬೇಕಾಗಿದೆ. ಪೋಷಕರ ನಡವಳಿಕೆ ವಿಶೇಷವಾಗಿ ಹೆಣ್ಣು ಮಕ್ಕಳ ಮೇಲೆ ಪರಿಣಾಮ ಭೀರುವುದರಿಂದಎಚ್ಚರವಹಿಸಬೇಕು. ವೃದ್ಧಾಪ್ಯದಲ್ಲಿ ಪೋಷಕರ ಬಗ್ಗೆಮಕ್ಕಳು ಹೆಚ್ಚಿನ ಕಾಳಜಿ ವಹಿಸುವ ಮೂಲಕಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ವಾರಿಯರ್ಸ್‌ಗೆ ಪಾದ ಪೂಜೆ: ಯುವ ಬ್ರಿಗೇಡ್‌ನ ತಾಲೂಕು ಮುಖ್ಯಸ್ಥ ಆನಂದ್ ಮರಿಗೌಡಮಾತನಾಡಿ, ತಾಯಿಗೆ ಗೌರವ ಸಲ್ಲಿಸುವುದಕ್ಕಾಗಿಇಂತಹ ಕಾರ್ಯಕ್ರಮವನ್ನು ರಾಜ್ಯಾದ್ಯಂತಏರ್ಪಡಿಸಲಾಗುತ್ತಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಕೋವಿಡ್ ವಾರಿಯರ್ ಆಗಿ ತಾಯಿಯಂತೆ ಶ್ರಮಿಸಿದ ತಾಲೂಕಿನ 25 ಆರೋಗ್ಯ ಇಲಾಖೆಯಶುಶ್ರೂಷಕಿಯರು, 25 ಆಶಾ ಕಾರ್ಯಕರ್ತೆಯರ ಪಾದ ಪೂಜೆ ಮಾಡುವ ಮೂಲಕ ಗೌರವಿಸಲಾಗುತ್ತಿದೆ ಎಂದರು.
ಅಭಿನಂದನೆ ಸ್ವೀಕರಿಸಿದವರ ಪರವಾಗಿ ಶುಶ್ರೂಷಕಿ ಅನಿತಾ ಅನಿಸಿಕೆ ವ್ಯಕ್ತಪಡಿಸಿದರು. ಯುವ ಬ್ರಿಗೇಡ್‌ನ ರಾಕೇಶ್, ಆಂಜಿನಪ್ಪ, ಸೋದರಿನಿವೇದಿತಾ ಪ್ರತಿಷ್ಠಾನದ ಮುಖ್ಯಸ್ಥೆ ಅನಿತಾ ನಾಗರಾಜ್ ಹಾಜರಿದ್ದರು.