Advertisement
ಅಸ್ಸಾಂ ನ ಬೊಕಾಖಾಟ್ ನಲ್ಲಿ ನಡೆದ ವಿಧಾನಸಭಾ ಚುನವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರದಾನಿ ಮೋದಿ, ಈಗಾಗಲೇ ನಿರ್ಧಾರವಾಗಿದೆ, ಅಸ್ಸಾಂ ನಲ್ಲಿ ಎರಡನೇ ಬಾರಿ ಬಿಜೆಪಿ ಅಧಿಕಾರ ಹಿಡಿಯಲಿದೆ, ‘ದೂಸ್ರಿ ಬಾರ್ ಬಿಜೆಪಿ ಸರ್ಕಾರ್’, ‘ದೂಸ್ರಿ ಬಾರ್ ಎನ್ ಡಿ ಎ ಸರ್ಕಾರ್’, ‘ದೂಸ್ರಿ ಬಾರ್ ಡಬಲ್ ಎಂಜಿನ್ ಕಿ ಸರ್ಕಾರ್’ ಎಂದು ಪರೋಕ್ಷವಾಗಿ ಕಾಂಗ್ರೆಸ್ ಗೆ ಚಾಟಿ ಏಟು ನೀಡಿದ್ದಾರೆ.
Related Articles
Advertisement
ಅಸ್ಸಾಂ ನಲ್ಲಿ ಬಿಜೆಪಿ ಆಡಳಿತದಲ್ಲಿ ಅರಣ್ಯ ವ್ಯಾಪ್ತಿಗೆ ಸಂಬಂಧಪಟ್ಟಂತೆ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾದದ್ದನ್ನು ನಾವು ಕಾಣಬಹುದು. ಇದು ಪ್ರವಾಸೋದ್ಯಮಕ್ಕೆ ಹಾಗೂ ಆರ್ಥಿಕ ಚಟುವಟಿಕೆಗೆ ಪ್ರೋತ್ಸಾಹವನ್ನು ನೀಡಿದೆ. ನೈಸರ್ಗಿಕ, ಆದ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಪಾರಂಪರಿಕ ಪ್ರವಾಸೋದ್ಯಮಗಳಲ್ಲಿ ಭಾರತವನ್ನು ಪ್ರಮುಖ ರಾಷ್ಟ್ರಗಳಲ್ಲಿ ಸೇರಿಸಬೇಕೆಂದು ನಾವು ಬಯಸುತ್ತೇವೆ. ಅಸ್ಸಾಂ ಈ ಎಲ್ಲಾ ಗುಣ ಲಕ್ಷಣವನ್ನು ಹೊಂದಿದೆ. ಎನ್ ಡಿ ಎ ಸರ್ಕಾರದ ಅಡಿಯಲ್ಲಿ ಅಸ್ಸಾಂ ಉನ್ನತ ಮಟ್ಟಕ್ಕೆರುತ್ತಿದೆ ಎಂದು ಪ್ರಧಾನಿ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ಕಾಂಗ್ರೆಸ್ ನನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, ಕೇಂದ್ರದಲ್ಲಿ ಹಾಗೂ ಅಸ್ಸಾಂ ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿತ್ತು. ಕಾಂಗ್ರೆಸ್ ಅಂದರೆ ಅಸ್ಥಿರತೆ ಹಾಗೂ ಭ್ರಷ್ಟಾಚಾರವೆಂದು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಒಳ್ಳೆಯದನ್ನು ಮಾಡುವುದಕ್ಕೆ ಅವರಲ್ಲಿ ಯಾವುದೇ ಒಳ್ಳೆಯ ದೃಷ್ಟಿ ಮತ್ತು ಉದ್ದೇಶ ಇಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಓದಿ : ಬೇಕಿದ್ದರೆ ನಳಿನ್ ಕಟೀಲ್ ಗೂ ಒಂದೆರಡು ಜೊತೆ ಬಟ್ಟೆ ದಾನ ಮಾಡ್ತೀನಿ: ಸಿದ್ದರಾಮಯ್ಯ