Advertisement

ಗೋರಕ್ಷಣೆಗೆ ಸರ್ಕಾರ ಕ್ರಮ ಕೈಗೊಂಡಿದ್ದು ಶ್ಲಾಘನೀಯ

04:44 PM Jan 15, 2021 | Team Udayavani |

ಬಾಳೆಹೊನ್ನೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಸಂತರ ಶತಮಾನಗಳ ಬೇಡಿಕೆಯಾದ ದೇಸಿ ಗೋ ಸಂರಕ್ಷಣೆ ಮತ್ತು ಗೋವುಗಳ ವರ್ಣ ಸಂಕರದ ವಿರುದ್ಧ ಕ್ರಮ ಕೈಗೊಂಡು ಸಂರಕ್ಷಣೆಗೆ ಮುಂದಾಗಿದ್ದು ಸಂತರ ಹೋರಾಟಕ್ಕೆ ಸಂದ ಗೌರವವಾಗಿದೆ ಎಂದು ಉಡುಪಿಯ ಹಂಗಾರಕಟ್ಟೆ ಬಾಳೆಕುದ್ರಿ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ತಿಳಿಸಿದರು.

Advertisement

ಕೆಮ್ಮಣ್ಣು ಕಾಮಧೇನು ಗೋ ಸೇವಾ ಕೇಂದ್ರಕ್ಕೆ ಮೇವನ್ನು ದಾನವಾಗಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶ ಗತ ವೈಭವಕ್ಕೆ ಮರಳಬೇಕಾದರೆ ಗೋ ಸಮೃದ್ಧಿಯಿಂದ ಮತ್ತು ಕೃಷಿ ಹಾಗೂ ಪರಿಸರದ ನಡುವೆ ಸಮತೋಲನ ಏರ್ಪಟ್ಟಾಗ ಮಾತ್ರ ಸಾಧ್ಯ. ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣವೂ ಸೋಮನಾಥ ದೇವಾಲಯದ ಪುನರ್‌ ನಿರ್ಮಾಣದಷ್ಟೇ ಮಹತ್ವದ್ದಾಗಿದೆ. ಎಲ್ಲಾ ಭಾರತೀಯರು ಕೈಜೋಡಿಸಿ ರಾಮ ಮಂದಿರ ನಿರ್ಮಾಣದ ಪ್ರಕ್ರಿಯೆಯ ಯಶಸ್ಸಿಗೆ ಕಾರಣರಾಗಬೇಕೆಂದರು. ಕಾಮದೇನು ಗೋ ಸೇವಾ ಕೇಂದ್ರದ ನಾಗೇಶ್‌ ಆಂಗೀರಸ, ಸುಮಾ ನಾಗೇಶ್‌, ಲಲಿತಾ ಆಂಗೀರಸ ಇದ್ದರು.

ಇದನ್ನೂ ಓದಿ: ಗಣಿನಾಡಿನಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ

Advertisement

Udayavani is now on Telegram. Click here to join our channel and stay updated with the latest news.

Next