Advertisement
“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ’ ಈ ಶ್ಲೋಕವೇ ಹೇಳುವಂತೆ ಎಲ್ಲಿ ನಾರಿಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆನೆಸಿರುತ್ತಾರೆ. ಹಾಗೇ ಯಾವ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸರಿಯಾದ ಸ್ಥಾನಮಾನ ನೀಡುತ್ತಾರೋ ಅಲ್ಲಿ ಧರ್ಮ ನೆಲೆಸಿರುತ್ತದೆ ಎಂದು ಬಲ್ಲವರು ಹೇಳುತ್ತಾರೆ. ನಾವೆಲ್ಲರೂ ಹೆಣ್ಣುಮಗುವಿನ ಸುರಕ್ಷತೆ ಬಗ್ಗೆ ಯೋಚಿಸಬೇಕು. ಆಗ ಮಾತ್ರ ಆಕೆ ಯಾವುದೇ ನಿರ್ಭಯವಿಲ್ಲದೆ ಬದುಕಲು ಸಾಧ್ಯ.
Related Articles
ಹೆಣ್ಣು ಮ್ಕಕಳು ಸಮಾಜದಲ್ಲಿ ಎದುರಿಸುತ್ತಿರುವ ಎಲ್ಲ ಅಸಮಾನತೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅವರ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಅರಿವು ಬೆಳೆಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
Advertisement
ಜಾಗೃತಿ ದಿನಇಂದಿನ ಕಾಲಘಟ್ಟದಲ್ಲಿ ಹೆಣ್ಣು ಪ್ರತಿಕ್ಷಣ ಶೋಷಣೆಗೆ ಒಳಗಾಗುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ಜಾಗೃತಗೊಳಿಸುವುದಕ್ಕಾಗಿ ಭಾರತದಲ್ಲಿ ಜ. 24ರಂದು ರಾಷ್ಟ್ರೀಯ ಹೆಣ್ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ 2008ರಿಂದ ಈ ದಿನವನ್ನು ಆಚರಿಸುತ್ತದೆ. ಹೆಣ್ಮಕ್ಕಳ ರಕ್ಷಣೆ, ಲಿಂಗ ತಾರತಮ್ಯ, ಸಮಾಜದಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾದ ಜಾಗೃತಿಗೊಳಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. 2019ರಲ್ಲಿ ಉತ್ತಮ ನಾಳೆಗಾಗಿ ಹೆಣ್ಣು ಮಕ್ಕಳನ್ನು ಸಶಕ್ತಗೊಳಿಸುವುದು ಎಂಬ ಥೀಮ್ ಅನ್ನು ಇಟ್ಟುಕೊಂಡು ಕಳೆದ ವರ್ಷದ ಈ ದಿನವನ್ನು ಆಚರಿಸಲಾಗಿತ್ತು. ಅರಿವು ನಮ್ಮಿಂದಲೂ ಸಾಧ್ಯ
ಹೆಣ್ಣು ಮಗುವಿನ ಮಹತ್ವದ ಬಗ್ಗೆ ಹೆತ್ತವರಲ್ಲಿ ಜಾಗೃತಿ ಮೂಡಿಸುವುದು.
ಆರೋಗ್ಯ, ಶಿಕ್ಷಣ ಸಹಿತ ಹೆಣ್ಣು ಮಗು ಎದುರಿಸುವ ಸವಾಲುಗಳನ್ನು ನಿವಾರಿಸುವುದು.
ಲಿಂಗಸಮಾನತೆಯ ಬಗ್ಗೆ ಜಾಗೃತಿ ಜಾಥಾ
14 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ
ಹಿಂದುಳಿದ ಪ್ರದೇಶದ ಮಕ್ಕಳಿಗೆ ಸರಿಯಾದ ಶಿಕ್ಷಣ ವ್ಯವಸ್ಥೆ
ಕಡ್ಡಾಯ ವಿವಾಹ ನೋಂದಣಿ ಮಾಡಿಸಲು ಜಾಗೃತಿ
ಹೆಣ್ಮಕ್ಕಳ ಸುರಕ್ಷತೆಗೆ ಹೆಚ್ಚಿನ ಕ್ರಮ ವಹಿಸುವುದು
ಗರ್ಭಿಣಿಯರಿಗೆ ಪ್ರಸವಪೂರ್ವ ಆರೋಗ್ಯ ಸೇವೆಯ ಸೌಲಭ್ಯ.
ಹೆಣ್ಣು ಮಗುವಿನ ಲಿಂಗಾನುಪಾತ ಕುಸಿಯದಿರಲು ಕಾರ್ಯಯೋಜನೆ
ಮಗುವಿನ ಆರೋಗ್ಯ, ಜೀವನಶೈಲಿ ಸುಧಾರಿಸಲು ಕ್ರಮ ಹೆಣ್ಮಕ್ಕಳ ಸುರಕ್ಷೆಗಾಗಿ ಹಲವು ಕಾನೂನು
ಹೆಣ್ಣು ಮಗುವಿನ ಸುರಕ್ಷತೆ ಮತ್ತು ಭದ್ರತೆಗಾಗಿ ಸರಕಾರವು ಹಲವಾರು ಕಾನೂನುಗಳನ್ನು ರಚಿಸಿದೆ. ಹೆಣ್ಮಕ್ಕಳಿಗೆ ತೊಂದರೆ ಅಥವಾ ಹಿಂಸೆ ನೀಡಿದರೆ ಅವರ ವಿರುದ್ಧ ಕಠಿನವಾದ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಹೆಣ್ಮಕ್ಕಳ ಸುರಕ್ಷತೆಗೆ ರೂಪಿಸಿರುವ ಕಾನೂನುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ: ಬಾಲ್ಯ ವಿವಾಹ ತಡೆಗಾಗಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು 2006ರಲ್ಲಿ ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಪ್ರಕಾರ ಬಾಲ್ಯ ವಿವಾಹಕ್ಕೆ ಮುಂದಾಗುವವವರಿಗೆ ಮತ್ತು ಸಂಬಂಧಪಟ್ಟವರಿಗೆ ಕಠಿನ ಶಿಕ್ಷೆ ವಿಧಿಸಲಾಗುತ್ತದೆ. ಉಚಿತ ಕಡ್ಡಾಯ ಶಿಕ್ಷಣದ ಹಕ್ಕು: ಪ್ರತಿ ಹೆಣ್ಮಗುವಿಗೆ 14 ವರ್ಷದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯ್ದೆ 2009 ಅಡಿಯಲ್ಲಿ, 6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ನೆರೆಹೊರೆಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣದ ಹಕ್ಕಿದೆ. ಮೆಡಿಕಲ್ ಟರ್ಮಿನೇಶನ್ ಆಫ್ ಪ್ರಗ್ನೆನ್ಸಿ ಆ್ಯಕ್ಟ್ (1971): ಈ ಆ್ಯಕ್ಟ್ ನ ಪ್ರಕಾರ ಹೆಣ್ಣು ಗರ್ಭವತಿಯಿದ್ದಾಗ ಲಿಂಗ ಪತ್ತೆ ಮಾಡುವುದು ಅಪರಾಧವಾಗಿದೆ. ವೈದ್ಯಕೀಯ ಮುಕ್ತಾಯದ ಗರ್ಭಧಾರಣೆಯ ಕಾಯ್ದೆ (1971) ಅಥವಾ ಎಂಟಿಪಿಎ ಸೆಕ್ಷನ್ 3 (4) (ಬಿ) ಪ್ರಕಾರ ಗರ್ಭಿಣಿ ಮಹಿಳೆಯ ಒಪ್ಪಿಗೆಯೊಂದಿಗೆ ಹೊರತುಪಡಿಸಿ ಯಾವುದೇ ಗರ್ಭಧಾರಣೆಯನ್ನು ಮಾಡಲಾಗುವುದಿಲ್ಲ. ವರದಕ್ಷಿಣೆ ನಿಷೇಧ ಕಾಯ್ದೆ, 1961: ಸಮಾಜದ ಬಹುದೊಡ್ಡ ಪಿಡುಗಾದ ವರದಕ್ಷಿಣೆ ನಿಷೇಧ ಕಾಯ್ದೆಯನ್ನು 1961ರಲ್ಲಿ ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಪ್ರಕಾರ ಮದುವೆ ಸಂದರ್ಭ ಹೆಣ್ಮುವಿನ ಹೆತ್ತವರಲ್ಲಿ ವರದಕ್ಷಿಣೆ ತೆಗೆದುಕೊಳ್ಳುವುದು ಕಾನೂನಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಹೆಣ್ಮಕ್ಕಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿರುವ ಕೆಲವು ಮಹತ್ವದ ಯೋಜನೆಗಳು
1 ಸುಕನ್ಯಾ ಸಮೃದ್ಧಿ ಯೋಜನೆ
2 ಬೇಟಿ ಬಚಾವೋ, ಬೇಟಿ ಪಡಾವೋ
3 ಬಾಲಿಕಾ ಸಮೃದ್ಧಿ ಯೋಜನಾ
4 ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ
5 ಸಿಬಿಎಸ್‌ಇ ಸ್ಕಾಲರ್‌ಶಿಪ್ ಸ್ಕೀಮ್
6 ಧನಲಕ್ಷ್ಮೀ ಸ್ಕೀಮ್
7 ನ್ಯಾಶನಲ್ ಸ್ಕೀಮ್ ಆಫ್ ಇನ್ಸೆಂಟಿವ್ ಟು ಗರ್ಲ್ಸ್ ಫಾರ್ ಸೆಕೆಂಡರಿ ಎಜುಕೇಶನ್