ಪೆರ್ಲ:ಇಲ್ಲಿನ ನಲಂದಾ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಹಿತಿ ಕಾರ್ಯಾಗಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೆರ್ಲ ಆಯುಷ್ಮಾನ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಘ ಮಾಹಿತಿ ನೀಡುತ್ತಾ, ಡೆಂಗ್ಯು, ಚಿಕುನ್ ಗುನ್ಯ,ಮಲೇರಿಯಾ,ಇಲಿ ಜ್ವರ,ಕೊಲೇರಾ ಮೊದಲಾದ ಸಾಂಕ್ರಾಮಿಕ ರೋಗಗಳು ಇಂದು ಎಲ್ಲೆಡೆ ಜನರಲ್ಲಿ ಭೀತಿಸೃಷ್ಟಿಸುತ್ತಿದ್ದು ,ರೋಗ ಬಂದಾಗ ಚಿಕಿತ್ಸೆ ಪಡೆಯುವ ಬದಲು ರೋಗಗಳು ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಸೂಕ್ತ.
ಶಾಲಾ ಕಾಲೇಜುಗಳಲ್ಲಿ ಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅಗತ್ಯ.ಮಳೆಗಾಲದಲ್ಲಿ ರೋಗ ಹರಡುವ ಕಾರಣ, ರೋಗಲಕ್ಷಣಗಳು,ಚಿಕಿತ್ಸೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಜಗತ್,ಅಭಿಲಾಶ್,ಕವಿತಾ,ಅಂಜನಾ ಉಪಸ್ಥಿತರಿದ್ದರು.ಕಾಮರ್ಸ್ ಹಾಗೂ ಮ್ಯಾನೇಜೆ¾ಂಟ್ ವಿಭಾಗ ಉಪನ್ಯಾಸಕ ಅಜಿತ್ ಎಸ್. ಸ್ವಾಗತಿಸಿ,ಕಾರ್ತಿಕ್ ವಂದಿಸಿದರು.ದೀಕ್ಷಾ ನಿರೂಪಿಸಿದರು.
“ಜಾಗೃತಿ ಶಿಬಿರಗಳಿಂದ ಅರಿವು ಮೂಡಿಸಲು ಸಾಧ್ಯ’
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಪ್ರಾಂಶುಪಾಲ ಕೇಶವ ಶರ್ಮ ಮಾತನಾಡುತ್ತಾ ಆಧುನಿಕ ಶೈಲಿಯ ಬದುಕಿನ ಜಂಜಾಟದಲ್ಲಿ ನಾವು ನಮ್ಮ ಆರೋಗ್ಯದ ಕಡೆ ಗಮನ ನೀಡುವುದು ಕಡಿಮೆಯಾಗಿದೆ.ಇಂತಹ ಜಾಗೃತಿ ಶಿಬಿರಗಳಲ್ಲಿ ಪಾಲ್ಗೊಂಡು ತಿಳುವಳಿಕೆ ಪಡೆದರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗ್ರತೆ ವಹಿಸಿ ಇತರರಿಗೂ ಅರಿವು ನೀಡಲು ಸಾಧ್ಯ ಎಂದರು.
ಮಳೆಗಾಲ ಆರಂಭವಾದೊಡನೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ.ಇಂತಹ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ರೋಗ ಬಾರದಂತೆಯು,
ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ಕೇಶವ ಶರ್ಮ ಅವರು ಹೇಳಿದರು.