Advertisement

State Government ನುಡಿದಂತೆ ನಡೆದಿಲ್ಲ : ಭಾರತಿ ಶೆಟ್ಟಿ

08:16 PM Mar 22, 2024 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಸಮರ್ಪಕವಾಗಿ ಕೊಡುವುದರಲ್ಲಿ ವಿಫ‌ಲವಾಗಿದ್ದು, ನುಡಿದಂತೆ ನಡೆದಿಲ್ಲ; ನಡೆದಂತೆ ನುಡಿಯುತ್ತಿಲ್ಲ ಎಂದು ವಿಧಾನಪರಿಷತ್‌ ಸದಸ್ಯೆ ಭಾರತಿ ಶೆಟ್ಟಿ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ನಿರ್ವಹಿಸದೆ ಚೂರುಪಾರು ಗ್ಯಾರಂಟಿಗಳನ್ನು ಮಾತ್ರ ಕೊಟ್ಟಿದೆ. ಬೇರೆ ಯಾವ ಕೆಲಸವನ್ನೂ ಮಾಡಿಲ್ಲ. ಅಂಗನವಾಡಿ, ಆಶಾ ಕಾರ್ಯಕರ್ತರನ್ನು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಳಸುವ ದೊಡ್ಡ ಷಡ್ಯಂತ್ರವನ್ನು ಈ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರದ ಸೋಲಾರ್‌ ರೂಫ್ ಯೋಜನೆಗೆ ರಾಜ್ಯ ಸರ್ಕಾರ ಒಂದೇ ಒಂದು ಪೈಸೆ ನೀಡದೇ ಇದ್ದರೂ ಕೂಡ ಆ ಯೋಜನೆಯನ್ನು ತಾವು ಮಾಡಿದ್ದಾಗಿ ಕರಪತ್ರ ಹಂಚುತ್ತಿದ್ದಾರೆ ಎಂದು ಟೀಕಿಸಿದರು.

ಎಲ್ಲೆಡೆ ನೀರಿಗಾಗಿ ಹಾಹಾಕಾರವಿದ್ದು ಬೆಂಗಳೂರಿನಲ್ಲಿ ಟ್ಯಾಂಕರ್‌ಗಳ ದೊಡ್ಡ ಮಾಫಿಯಾ ಇದೆ. ಸರ್ಕಾರ ನಿಗದಿಪಡಿಸಿದ ದರಕ್ಕೆ ನೀರು ಪೂರೈಕೆ ಆಗುತ್ತಿಲ್ಲ. ಟ್ಯಾಂಕರ್‌ ಮಾಲೀಕರು ಸರ್ಕಾರದ ಮಾತನ್ನು ಕೇಳುತ್ತಿಲ್ಲ. ಸರ್ಕಾರ ಪರಿಹಾರವನ್ನು ಒದಗಿಸಿಲ್ಲ ಎಂದು ಆರೋಪಿಸಿದರು. ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ, ವೆಂಕಟೇಶ ದೊಡ್ಡೇರಿ, ಡಾ.ನರೇಂದ್ರ ರಂಗಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next