Advertisement

ಹಣ ಸಾಗಣೆ, ಹಂಚಿಕೆ ಮೇಲೆ ಐಟಿ ಕಣ್ಣು

06:00 AM Apr 04, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಣ ವರ್ಗಾವಣೆ, ಸಾಗಣೆ, ದಾಸ್ತಾನು ಬಗ್ಗೆ ಆದಾಯ ತೆರಿಗೆ
ಇಲಾಖೆ ಹದ್ದಿನ ಕಣ್ಣಿಟ್ಟಿದೆ.

Advertisement

ಚುನಾವಣಾ ಆಯೋಗದ ಸೂಚನೆ ಮೇರೆಗೆ ಹಣಕಾಸು ವಹಿವಾಟು ಮೇಲೆ ನಿಗಾವಹಿಸಲು ಹಣ ಹಂಚಿಕೆ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಹಾಗೂ ತುರ್ತು ಕಾರ್ಯಾಚರಣೆಗಾಗಿ ಕ್ವೀನ್ಸ್‌ ರಸ್ತೆಯಲ್ಲಿರುವ ಐಟಿ ಕಚೇರಿಯಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಒಂದು ವೇಳೆ ಅಭ್ಯರ್ಥಿಗಳು/ ಪಕ್ಷದ ಕಾರ್ಯಕರ್ತರು ಅಕ್ರಮವಾಗಿ ಹಣ, ಇತರೆ ಮೌಲ್ಯಯುತ ವಸ್ತುಗಳನ್ನು ನೀಡಿ ಆಮಿಷವೊಡ್ಡಿದ್ದರೆ ಕೂಡಲೇ ಈ ನಿಯಂತ್ರಣ ಕೊಠಡಿಗೆ ಸಾರ್ವಜನಿಕರು ದೂರು ನೀಡಬಹುದು.

ಸ್ಪಷ್ಟ ಹಾಗೂ ನಿಖರ ಮಾಹಿತಿ ಮೇರೆಗೆ ನಿಗದಿತ ಸ್ಥಳಕ್ಕೆ ಧಾವಿಸಿ ಅಕ್ರಮವೆಸಗಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ನಿಯಂತ್ರಣ ಕೊಠಡಿ ನಂಬರ್‌
080-22861126, ಮೊಬೈಲ್‌ ನಂ.8277413614, 8277422825 ಮತ್ತು ಟೋಲ್‌ ಫ್ರಿ ನಂ. 18004252115, 
ಫ್ಯಾಕ್ಸ್‌ ನಂ. 080-22866916 ಹಾಗೂ ಈ-ಮೇಲ್‌ ವಿಳಾಸ cleankarnatakaelection@incometax.gov.
in  ಈ ಮೂಲಕ ಸಾರ್ವಜನಿಕರು ಪಾರದರ್ಶಕ ಚುನಾವಣೆಗೆ ಸಹಕರಿಸುವಂತೆ ಆದಾಯ ತೆರಿಗೆ ಇಲಾಖೆ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next