Advertisement
ತೆರಿಗೆ ಪಾವತಿಯ ಬಗ್ಗೆ ಇ-ಕ್ಯಾಂಪೇನ್ ಆರಂಭಿಸಿರುವ ಕೇಂದ್ರ ನೇರ ತೆರಿಗೆ ಇಲಾಖೆ, ತಾಳೆಯಾಗದ ಲೆಕ್ಕವನ್ನು ಹೊಂದಿರುವ ವ್ಯಕ್ತಿ ಹಾಗೂ ಕಂಪೆನಿಗಳಿಗೆ ಅದನ್ನು ಸರಿಪಡಿಸುವುಕ್ಕಾಗಿ ಈ ಸಂದೇಶಗಳನ್ನು ಕಳುಹಿಸಲು ಆರಂಭಿಸಿದೆ.ಹಣಕಾಸು ವ್ಯವಹಾರಗಳು ಮತ್ತು ತೆರಿಗೆ ಪಾವತಿ ನಡುವೆ ತಾಳೆಯಾಗದ ಲೆಕ್ಕ ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಮಾತ್ರ ಈ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ಐಟಿ ಇಲಾಖೆ ಹೇಳಿದೆ.