Advertisement

Gift: 50 ಉದ್ಯೋಗಿಗಳಿಗೆ ಕಾರು ಗಿಫ್ಟ್ ನೀಡಿದ ಐಟಿ ಕಂಪನಿ

08:36 PM Jan 04, 2024 | Team Udayavani |

ಚೆನ್ನೈ: ತಮಿಳುನಾಡಿನ ಚೆನ್ನೈ ಮೂಲದ ಮಾಹಿತಿ ತಂತ್ರಜ್ಞಾನ(ಐಟಿ) ಕಂಪನಿಯೊಂದು ತನ್ನ 50 ಉದ್ಯೋಗಿಗಳಿಗೆ ಹೊಚ್ಚ ಹೊಸ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಮುರಳಿ ಅವರು ಅವರ ಪತ್ನಿಯೊಂದಿಗೆ ಸೇರಿಕೊಂಡು 2009ರಲ್ಲಿ ಐಟಿ ಕಂಪನಿಯೊಂದನ್ನು ಆರಂಭಿಸಿದ್ದರು. “ಕಂಪನಿ ಪ್ರಾರಂಭವಾದಾಗಿನಿಂದಲೂ ಇವರು ನಮ್ಮ ಜತೆಗಿದ್ದಾರೆ. ಈ ಉದ್ಯೋಗಿಗಳಿಗೆ ಏನಾದರೂ ನೀಡಬೇಕೆಂದು ಬಯಸಿ, 50 ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದೇವೆ’ ಎಂದು ಕಂಪನಿ ಸಂಸ್ಥಾಪಕ ಮುರಳಿ ತಿಳಿಸಿದ್ದಾರೆ.

Advertisement

“ನಾನು ಮತ್ತು ನನ್ನ ಪಾಲುದಾರರು ಕಂಪನಿಯಲ್ಲಿ ಷೇರುಗಳನ್ನು ಹೊಂದಿದ್ದೇವೆ. ಶೇ.33ರಷ್ಟು ಷೇರುಗಳನ್ನು ದೀರ್ಘಾವಧಿಯ ಉದ್ಯೋಗಿಗಳಿಗೆ ನೀಡಬೇಕೆಂದು ನಿರ್ಧರಿಸಿದೆವು. ಸಂಪತ್ತು ಹಂಚಿಕೆ ಯೋಜನೆಯಡಿ 50 ಉದ್ಯೋಗಿಗಳಿಗೆ ಉಡುಗೊರೆ ನೀಡಲಾಗಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next