Advertisement

ಭ್ರಷ್ಟಾಚಾರ ಪ್ರಕರಣದಲ್ಲಿ ರಾಂಚಿಯ ಮುಖ್ಯ ಐಟಿ ಕಮಿಷನರ್‌ ಸೆರೆ

12:46 PM Jul 13, 2017 | Team Udayavani |

ಹೊಸದಿಲ್ಲಿ : ಸಿಬಿಐ ಅಧಿಕಾರಿಗಳು ರಾಂಚಿಯ ಮುಖ್ಯ ಆದಾಯ ತೆರಿಗೆ ಆಯುಕ್ತ ತಪಸ್‌ ಕುಮಾರ್‌ ದತ್ತಾ ಅವರನ್ನು ಬಂಧಿಸಿದ್ದಾರೆ. ಭ್ರಷ್ಟಾಚಾರ  ಪ್ರಕರಣಕ್ಕೆ ಸಂಂಧಿಸಿದಂತೆ ದತ್ತಾ ಕುಮಾರ್‌ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ 3.5 ಕೋಟಿ ರೂ. ನಗದು ಪತ್ತೆಯಾಗಿರುವುದೇ ತಪಸ್‌ ಅವರ ಬಂಧನಕ್ಕೆ ಕಾರಣವಾಗಿದೆ. 

Advertisement

ನಿನ್ನೆ ಬುಧವಾರ ತಡ ರಾತ್ರಿ ದತ್ತಾ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು ಇಂದು ಅವರರನ್ನು ಕೋಲ್ಕತದಲ್ಲಿನ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಸಿಬಿಐ ವಕ್ತಾರ ಆರ್‌ ಕೆ ಗೌರ್‌ ತಿಳಿಸಿದ್ದಾರೆ. 

ದತ್ತಾ ಮತ್ತು ಇತರರ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ಎಫ್ಐಆರ್‌ ದಾಖಲಾದುದನ್ನು ಅನುಸರಿಸಿ ಕೋಲ್ಕತಾದಲ್ಲಿನ 18 ತಾಣಗಳಲ್ಲಿ ಹಾಗೂ ರಾಂಚಿಯಲ್ಲಿನ ಐದು ತಾಣಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next