Advertisement

ಎಲ್ಲೇ ಹೋದರೂ ಐಟಿಯವ್ರು ಬಿಡಲ್ಲ!

06:00 AM Dec 25, 2017 | |

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆ ನೋಟಿಸ್‌ ತಲುಪಬಾರದು ಎಂದು ವಿಳಾಸ ಮರೆ ಮಾಚಿದ್ದೀರಾ? ಇದುವರೆಗೆ ಹಾಗೆ 
ಮಾಡಿ ತಪ್ಪಿಸಿಕೊಂಡು ಬಚಾವಾದವರಿಗೆ ಇನ್ನು ಕಷ್ಟ ಖಚಿತ. ನಿಗದಿತ ತೆರಿಗೆದಾರ ನೀಡಿದ ವಿಳಾಸ ಸರಿಯೋ ತಪ್ಪೋ ಎನ್ನುವುದನ್ನು ಆದಾಯ ತೆರಿಗೆ ಇಲಾಖೆ ಇತರ ಮೂಲಗಳಿಂದಲೂ ಖಚಿತಪಡಿಸಿ ಕೊಳ್ಳಬಹುದು. ಅದಕ್ಕೆ ಸಂಬಂಧಿಸಿದ ನಿಯಮ ಗಳನ್ನು ಕೇಂದ್ರ ಸರಕಾರ ಮಾರ್ಪಾಡು ಮಾಡಿ ಆದೇಶ ಹೊರಡಿಸಿದೆ. ಬ್ಯಾಂಕ್‌, ವಿಮೆ, ಅಂಚೆ ಕಚೇರಿ, ಸಹಕಾರ ಸಂಘಗಳು, ನಗರ ಸಭೆ, ಪುರಸಭೆ, ಮಹಾನಗರ ಪಾಲಿಕೆ ಸಹಿತ ಸ್ಥಳೀಯ ಸಂಸ್ಥೆಗಳ ಮೂಲಕ ವಿಳಾಸ ಖಚಿತ ಪಡಿಸಿಕೊಂಡು ನೋಟಿಸ್‌ ನೀಡುವಂಥ ಅವಕಾಶವನ್ನು ಕೇಂದ್ರ ಕಲ್ಪಿಸಿಕೊಟ್ಟಿದೆ.

Advertisement

ಸದ್ಯ ಇರುವ ನಿಯಮ ಪ್ರಕಾರ, ಪಾನ್‌ ಕಾರ್ಡ್‌ ನಲ್ಲಿರುವ ವಿಳಾಸಕ್ಕೆ ಮಾತ್ರ ತೆರಿಗೆ ತಪ್ಪಿಸಿದ ಬಗ್ಗೆ ಪ್ರಶ್ನೆ ಮಾಡಿ ನೋಟಿಸ್‌ ನೀಡಲಾಗುತ್ತಿತ್ತು. ಹೆಚ್ಚಿನ ಸಂದರ್ಭಗಳಲ್ಲಿ ಪಾನ್‌ನಲ್ಲಿರುವ ವಿಳಾಸಕ್ಕೂ ತೆರಿಗೆದಾರ ವಾಸವಾಗಿರುವ ವಿಳಾಸಕ್ಕೂ ವ್ಯತ್ಯಾಸ ಇರುತ್ತಿತ್ತು. ಹೀಗಾಗಿ ನೋಟಿಸ್‌ ನೀಡಿದರೂ ಅದು ತಪ್ಪಿತಸ್ಥರಿಗೆ ತಲುಪುತ್ತಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತೆರಿಗೆ ಇಲಾಖೆ ಹಿರಿಯ ಅಧಿಕಾರಿ, “ಕೆಲವು ಬಾರಿ ತೆರಿಗೆದಾರ ನಿಜವಾದ ಕಾರಣದಿಂದ ವಿಳಾಸ ಬದಲಿಸಿರುವ ಸಾಧ್ಯತೆ ಇರುತ್ತದೆ ಅಥವಾ ನೋಟಿಸ್‌ನಿಂದ ತಪ್ಪಿಸಿಕೊಳ್ಳಲು ಸುಳ್ಳು ವಿಳಾಸ ನೀಡಿರಬಹುದು. ಹೀಗಾಗಿ ಅಂಥವರ ಪತ್ತೆ ನಿಯಮ ಗಳಲ್ಲಿ ಬದಲು ಮಾಡಲು ನಿರ್ಧರಿಸಲಾಗಿದೆ’ ಎಂದು ಹೇಳಿದ್ದಾರೆ.

ಡಿ.20ರಂದು ಈ ಬಗ್ಗೆ ನಿರ್ಧಾರ ಕೈಗೊಂಡು ಪ್ರಕಟನೆ ಹೊರಡಿಸಲಾಗಿದೆ ಎಂದಿದ್ದಾರೆ ಅವರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡ್ರೈವಿಂಗ್‌ ಲೈಸನ್ಸ್‌, ಮತದಾರರ ಗುರುತಿನ ಚೀಟಿಯಲ್ಲಿನ ವಿಳಾಸಗಳ ಮೂಲಕವೂ ನೋಟಿಸ್‌ ನೀಡಲು ವಿಳಾಸ ಪತ್ತೆಹಚ್ಚುವಂಥ ನಿಯಮ ಇದಾಗಿದೆ.

ಏಕೆ ಇಂಥ ನಿಯಮ?
ತೆರಿಗೆ ವಂಚನೆ ಮಾಡುವವರ ಕೈಯಿಂದ ಕೋಟ್ಯಂತರ ರೂ. ಮೌಲ್ಯದ ಮೊತ್ತ ಬಾಕಿ ಇರುತ್ತದೆ. ಅಂಥವರ ವಿರುದ್ಧ  ಕ್ರಮ ಕೈಗೊಳ್ಳಲು ನಿಜವಾದ ವಿಳಾಸ ಪತ್ತೆ ಹಚ್ಚುವ ಅಗತ್ಯವಿರುತ್ತದೆ. ಹೀಗಾಗಿ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ಕ್ರಮದಿಂದ ಇಲಾಖೆಗೆ ನಿಜವಾಗಿಯೂ ತೆರಿಗೆದಾರ ತಪ್ಪಿಸಿ ಕೊಳ್ಳಲು ಮುಂದಾಗಿದ್ದರೆ ಆತನನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಹೆಚ್ಚಿನ ಅಧಿಕಾರ ಇರುತ್ತದೆ. ಈ ಮೂಲಕ ಕೇಂದ್ರದ ಬೊಕ್ಕಸಕ್ಕೆ ನಷ್ಟವಾಗುವುದನ್ನೂ ತಪ್ಪಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next