Advertisement

IT; ಕಾಂಗ್ರೆಸ್‌ಗೆ 2,500 ಕೋ.ರೂ. ಆದಾಯ ತೆರಿಗೆ ಸಂಕಷ್ಟ?

12:33 AM Mar 31, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಕಾವು ಏರುತ್ತಿರುವಂತೆಯೇ ಕಾಂಗ್ರೆಸ್‌ ಪಕ್ಷವು ಸವಾಲುಗಳ ಮೇಲೆ ಸವಾಲು ಎದುರಿಸುತ್ತಿದೆ. ಈಗಾಗಲೇ 1,823 ಕೋಟಿ ರೂ. ಆದಾಯ ತೆರಿಗೆ ಬಾಕಿ ನೋಟಿಸ್‌ ಪಡೆದಿರುವ ಕಾಂಗ್ರೆಸ್‌ಗೆ ಶುಕ್ರವಾರ ರಾತ್ರಿ ಇನ್ನೆರಡು ನೋಟಿಸ್‌ ಬಂದಿವೆ. ಈ ಹಿನ್ನೆಲೆಯಲ್ಲಿ ಒಟ್ಟು 2,500 ಕೋಟಿ ರೂ. ತೆರಿಗೆ ಪಾವತಿ ಮಾಡಬೇಕಾದ ಸಂದಿಗ್ಧಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್‌ಗೆ ಐಟಿ ದಾಳಿ ನಡೆಯಲಿರುವುದು ಗೊತ್ತಿತ್ತು. ವಿಚಾರಣ ಪ್ರಕ್ರಿಯೆಗಳು ನಡೆಯುವ ಬಗ್ಗೆ ಮಾಹಿತಿಯಿತ್ತು. ಪ್ರತಿಕ್ರಿಯಿಸಲು ಬೇಕಾದಷ್ಟು ಸಮಯ ವನ್ನೂ ನೀಡಲಾಗಿತ್ತು. ದಿಲ್ಲಿ ಉಚ್ಚ ನ್ಯಾಯಾಲಯದಲ್ಲೂ ಈ ಬಗ್ಗೆ ತಿಳಿಸಲಾಗಿತ್ತು. ಅವಕ್ಕೆಲ್ಲ ಪ್ರತಿಕ್ರಿಯಿಸದೆ ವಿಳಂಬ ಮಾಡಿದ್ದರಿಂದಲೇ ಈ ನೋಟಿಸ್‌ ನೀಡಲಾಗಿದೆ ಎಂದು ಐಟಿ ಮೂಲಗಳು ಹೇಳಿವೆ.

Advertisement

2019ರಲ್ಲೇ ದಾಳಿ
2019ರ ಎಪ್ರಿಲ್‌ನಲ್ಲಿ ಐಟಿ ಇಲಾಖೆಯು ಅಂದಿನ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಅವರ ಸಹವರ್ತಿಗಳ ಮನೆಗಳ ಮೇಲೆ ದಾಳಿ ನಡೆಸಿತ್ತು. ಆಗ ಕಮಲ್‌ನಾಥ್‌ ಅವರ ನಿಕಟವರ್ತಿ ಎನ್ನಲಾಗಿದ್ದವರಿಗೆ ಸೇರಿದ ಕಂಪೆನಿ ಮತ್ತು ಮೇಘಾ ಎಂಜಿನಿಯರಿಂಗ್‌ನಿಂದ ಕಾಂಗ್ರೆಸ್‌ ನಗದು ಪಡೆದಿರುವುದು ರಶೀದಿಗಳಿಂದ ಗೊತ್ತಾಗಿತ್ತು. 2013-14ರಿಂದ 2019ರ ಎಪ್ರಿಲ್‌ ವರೆಗಿನ ಅವಧಿಯಲ್ಲಿ ಈ ರೀತಿ 626 ಕೋಟಿ ರೂ.ವರೆಗೆ ಹಣ ಕಾಂಗ್ರೆಸ್‌ಗೆ ಸಂದಾಯವಾಗಿತ್ತು. ಈ ಎಲ್ಲ ದಾಖಲೆಗಳಿದ್ದೇ ಐಟಿ ಇಲಾಖೆಯು ಸರಣಿ ನೋಟಿಸ್‌ ನೀಡಿದೆ.

ಪರಿ ಣಾ ಮವಾಗಿ ಕಾಂಗ್ರೆಸ್‌ ಬರೋ ಬ್ಬ ರಿ 2,500 ಕೋಟಿ ರೂ.ವರೆಗೆ ತೆರಿಗೆ ಪಾವತಿಸಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. ಕಮಲ್‌ನಾಥ್‌ ಅವರ ಅಧಿಕೃತ ಕಚೇರಿಯ ಮೂಲಕ ಎಐಸಿಸಿಗೆ 20 ಕೋಟಿ ರೂ. ಸಂದಾ ಯ ವಾದ ಸಾಕ್ಷ್ಯ ಕೂಡ ಐಟಿ ಇಲಾಖೆ ಬಳಿ ಇದೆ ಎನ್ನಲಾಗಿದೆ.

ಗುತ್ತಿಗೆಗೆ ಪ್ರತಿಯಾಗಿ ನಗದು
ಮೇಘಾ ಎಂಜಿನಿಯರಿಂಗ್‌ಗೆ ಗುತ್ತಿಗೆ ನೀಡಿದ್ದಕ್ಕೆ ಪ್ರತಿಯಾಗಿ ನಗದನ್ನು ನೀಡಲಾಗಿದೆ. ಕಮಲನಾಥ್‌ ಅವರ ಸಹವರ್ತಿಗಳಿಂದ ಬಂದ ನಗದು ಮಧ್ಯಪ್ರದೇಶದಲ್ಲಿ ನಡೆಸಲಾದ ದೊಡ್ಡ ಭ್ರಷ್ಟಾಚಾರದ ಹಣ. ಈ ಹಗರಣದಲ್ಲಿ ಹಿರಿಯ ಅಧಿಕಾರಿಗಳು, ಸಚಿವರು, ಉದ್ಯಮಿಗಳ ಸಹಿತ ಹಲವರಿಂದ ಲಂಚ ಪಡೆಯಲಾಗಿದೆ. ದಾಳಿ ವೇಳೆ ದೊರೆತ ದಾಖಲೆಗಳು, ವಾಟ್ಸ್‌ಆ್ಯಪ್‌ ಸಂದೇಶಗಳು ಮತ್ತು ದಾಖಲಿಸಿಕೊಳ್ಳಲಾದ ಹೇಳಿಕೆಗಳು ನಗದು ಪಡೆದಿದ್ದನ್ನು ಸಾಬೀತುಪಡಿಸುತ್ತವೆ ಎಂದು ಮೂಲಗಳು ತಿಳಿಸಿವೆ. ಆದಾಯ ತೆರಿಗೆ ಇಲಾಖೆ ಕಾಯ್ದೆಯ 13ಎ ಸೆಕ್ಷನ್‌ ಪ್ರಕಾರ ರಾಜಕೀಯ ಪಕ್ಷವು 2 ಸಾವಿರ ರೂ.ಗಳಿಗಿಂತ ಹೆಚ್ಚು ಮೊತ್ತದ ದೇಣಿಗೆಯನ್ನು ನಗದು ರೂಪದಲ್ಲಿ ಪಡೆಯುವುದರ ಸಹಿತ ಅನೇಕ ಷರತ್ತುಗಳನ್ನು ಪಾಲಿ ಸದೆ ಇದ್ದರೆ ತೆರಿಗೆ ವಿನಾಯಿತಿ ದೊರೆಯುವುದಿಲ್ಲ. ಆಗ ಪಕ್ಷವು ಪಡೆದು ಅಷ್ಟೂ ಹಣಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಕಾಂಗ್ರೆಸ್‌ ವಿಷಯದಲ್ಲೂ ಈ ಅಂಶವೇ ಉರುಳಾಗಿದೆ.

ಎಲ್ಲ ಪಕ್ಷಗಳಿಗೂ ಎಚ್ಚರಿಕೆ: ಚಿದಂಬರಂ
ಕಾಂಗ್ರೆಸ್‌ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆಯು 130 ಕೋಟಿ ರೂ. ದಂಡ ವಿಧಿಸಿರುವುದು ಎಲ್ಲ ರಾಜಕೀಯ ಪಕ್ಷಗಳು ಮತ್ತು ಜನರಿಗೆ ನೀಡಿರುವ ಎಚ್ಚರಿಕೆಯ ಘಂಟೆಯಾಗಿದೆ ಎಂದು ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಹೇಳಿದ್ದಾರೆ. ಬಿಜೆಪಿಯ ಅಜೆಂಡಾ ಒಂದು ರಾಷ್ಟ್ರ ಒಂದು ಚುನಾವಣೆ ಎಂದರೆ ಬೇರೆ ಏನೂ ಅಲ್ಲ; ಒಂದು ರಾಷ್ಟ್ರ, ಒಂದು ಪಕ್ಷವೇ ಆಗಿದೆ. ಇದು ಎಲ್ಲರಿಗೂ ಎಚ್ಚರಿಕೆಯ ಘಂಟೆ ಎಂದು ಅವರು ತಮಿಳುನಾಡಿನ ಪುದುಕೊಟ್ಟೈಯಲ್ಲಿ ತಿಳಿಸಿದ್ದಾರೆ.

Advertisement

ನೋಟಿಸ್‌ಗಳ ಹಿಂದೇನಿದೆ?
2019ರಲ್ಲಿ ಅಂದಿನ ಮಧ್ಯಪ್ರದೇಶ ಸಿಎಂ ಕಮಲನಾಥ್‌ ಸಹವರ್ತಿಗಳ ಮೇಲೆ ಐಟಿ ದಾಳಿ
ಮೇಘಾ ಎಂಜಿನಿಯರಿಂಗ್‌ ಮತ್ತಿತರ ಕಂಪೆನಿಗಳಿಂದ “ಕೈ’ಗೆ 626 ಕೋಟಿ ರೂ. ದೇಣಿಗೆ
ಕಮಲ್‌ನಾಥ್‌ ಅಧಿಕೃತ ಕಚೇರಿ ಯಿಂದಲೇ ಎಐಸಿಸಿಗೆ 20 ಕೋಟಿ ರೂ. ಸಂದಾಯ. ಈ ಬಗ್ಗೆ ಐಟಿ ಬಳಿಯಿದೆ ರಶೀದಿ, ಇತರ ಸಾಕ್ಷ್ಯ?
ಎಲ್ಲ ದಾಖಲೆಗಳನ್ನಿಟ್ಟು ಕೊಂಡೇ ಐಟಿ ಇಲಾಖೆಯಿಂದ ಕಾಂಗ್ರೆಸ್‌ಗೆ ಸರಣಿ ನೋಟಿಸ್‌

1,823 ಕೋಟಿ ರೂ. ಪಾವತಿಗೆ ನೋಟಿಸ್‌ ಬಂದ ಬೆನ್ನಲ್ಲೇ ಐಟಿ ಇಲಾಖೆ ಮತ್ತೆರಡು ನೋಟಿಸ್‌ ನೀಡಿದೆ. ಕಾಂಗ್ರೆಸ್‌ ತೆರಿಗೆ ಭಯೋತ್ಪಾದನೆಗೆ ಗುರಿಯಾಗುತ್ತಿದೆ.
– ಜೈರಾಮ್‌ ರಮೇಶ್‌, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next