Advertisement

ಇಸ್ತಾಂಬುಲ್‌ ದಾಳಿಗೈದ ಉಗ್ರ ಸಿರಿಯಾದಲ್ಲಿ ಐಸಿಸ್‌ ಪರ ಹೋರಾಡಿದ್ದ

04:12 PM Jan 03, 2017 | udayavani editorial |

ಇಸ್ತಾಂಬುಲ್‌ : ಇಸ್ತಾಂಬುಲ್‌ನ ನೈಟ್‌ ಕ್ಲಬ್‌ನಲ್ಲಿ 39 ಜನರ ಹತ್ಯೆಗೈದಿದ್ದ ಬಂದೂಕುಧಾರಿ ಉಗ್ರನು ಐಸಿಸ್‌ ಉಗ್ರ ಸಂಘಟನೆಗಾಗಿ ಸಿರಿಯಾದಲ್ಲಿ ಹೋರಾಡಿದ್ದ ಎಂದು ಟರ್ಕಿ ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ತಲೆಮರೆಸಿಕೊಂಡಿರುವ ಈ ಉಗ್ರನಿಗಾಗಿ ನಡೆದಿರುವ ಶೋಧ ಕಾರ್ಯವನ್ನು ಈಗ ಇನ್ನಷ್ಟು ಚುರುಕುಗೊಳಿಸಲಾಗಿದೆ.

Advertisement

ಇಸ್ತಾಂಬುಲ್‌ನ ರೀನಾ ನೈಟ್‌ಕ್ಲಬ್‌ ಮೇಲೆ ಹೊಸ ವರ್ಷದ ಮುನ್ನಾ ದಿನದ ರಾತ್ರಿ ದಾಳಿ ಗೈದು ಅಲ್ಲಿ ನೆರೆದಿದ್ದ ಜನರ ಮೇಲೆ 120 ಬುಲೆಟ್‌ಗಳನ್ನು ಹಾರಿಸಿ 39 ಜನರ ಮಾರಣ ಹೋಮ ನಡೆಸಿದ್ದ ಶಂಕಿತ ಐಸಿಸ್‌ ಉಗ್ರನ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. 

ಉಗ್ರನ ದಾಳಿಗೆ ಹತರಾಗಿದ್ದ 39 ಮಂದಿಯ ಪೈಕಿ 27 ಮಂದಿ ವಿದೇಶೀಯರಾಗಿದ್ದು ಇವರಲ್ಲಿ ಹೆಚ್ಚಿನವರು ಅರಬ್‌ ದೇಶಗಳ ಪ್ರಜೆಗಳಾಗಿದ್ದಾರೆ. ಇಸ್ಲಾಮಿಕ್‌ ಉಗ್ರ ಸಂಘಟನೆ ನಿನ್ನೆಯಷ್ಟೇ ಈ ದಾಳಿ ತನ್ನದೇ ಕೃತ್ಯವೆಂದು ಹೇಳಿಕೊಂಡಿದೆ. 

ಟರ್ಕಿ ಸರಕಾರ ಈ ತನಕ 12 ಮಂದಿ ಶಂಕಿತರನ್ನು ಈ ಘಟನೆ ಸಂಬಂಧ ಬಂಧಿಸಿದೆ. ಇವರಲ್ಲಿರುವ ಓರ್ವ ಮಹಿಳೆಯು ಉಗ್ರನ ಪತ್ನಿ ಎಂದು ಶಂಕಿಸಲಾಗಿದೆಯಾದರೂ ಅಧಿಕಾರಿಗಳು ಆ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next