Advertisement
ಮೂಲತಃ ಹೆಜಮಾಡಿ ನಿವಾಸಿ ಯಾಗಿದ್ದು ಸದ್ಯ ಬಲ್ಮಠದಲ್ಲಿರುವ ಎಚ್.ಬಿ. ಮಹಮ್ಮದ್ ಸುಮಾರು 10 ವರ್ಷಗಳಿಂದ ಕನ್ನಂಗಾರು ಮಸೀದಿಯಲ್ಲಿ ಅಧ್ಯಕ್ಷರಾಗಿದ್ದು ಇತ್ತೀಚೆಗೆ ಮಸೀದಿಯ ಹಣದ ವಿಚಾರದಲ್ಲಿ ಹೆಜಮಾಡಿಯ ಎಚ್.ಸೂಫಿ ಮತ್ತು ಅವರ ತಮ್ಮ ಸಂಶುದ್ದೀನ್ ನೊಂದಿಗೆ ತಕರಾರು ಉಂಟಾಗಿತ್ತು. ಇದೇ ವಿಚಾರವಾಗಿ ಸಂಶುದ್ದೀನ್ ಶಾರ್ಜಾದಿಂದ ಕರೆ ಮಾಡಿ, ವಾಟ್ಸಾಪ್ ಸಂದೇಶ ಕಳುಹಿಸಿ ಜೀವ ಬೆದರಿಕೆಯೊಡ್ಡಿದ್ದ.ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಸಂಶುದ್ದೀನ್ ಡಿ.31 ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಈತನ ವಿರುದ್ದ ಎಲ್ ಒ ಸಿ ಇದ್ದ ಕಾರಣ ಇಮಿಗ್ರೇಶನ್ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ವಿರುದ್ದ ಸೂಕ್ತ ಕಾನೂನು ಕ್ರಮ ಜರಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.