Advertisement

ಪ್ರವಾಹ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಣೆ

04:39 PM Feb 29, 2020 | Team Udayavani |

ರೋಣ/ಹೊಳೆಆಲೂರು: ಸಮೀಪದ ಬಿ.ಎಸ್‌ .ಬೇಲೇರಿ ನವ ಗ್ರಾಮದಲ್ಲಿ ಶುಕ್ರವಾರ ಪ್ರವಾಹ ಸಂತ್ರಸ್ತರಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆಸರೆ ಮನೆಗಳ ಹಕ್ಕುಪತ್ರ ವಿತರಿಸಿದರು.

Advertisement

ನಂತರ ಮಾತನಾಡಿದ ಅವರು ಪ್ರವಾಹದಿಂದ ಎಲ್ಲರಿಗೂ ಸಾಕಷ್ಟು ಹಾನಿಯಾಗಿದೆ. ಇಂತಹ ಸಮಯದಲ್ಲಿ ಪರಸ್ಪರ ಸಹಕಾರ ಇರಬೇಕೇ ವಿನಃ ಜಗಳ ಮಾಡಬಾರದು. ಶಾಂತಿಗೆ ಹೆಸರಾದ ಈ ಗ್ರಾಮದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಗ್ರಾಮದ ಹಿರಿಯರು ಪರಸ್ಪರ ಬಗೆಹರಿಸಿಕೊಳ್ಳಬೇಕು ಎಂದರು.

ನರಗುಂದ ಮತಕ್ಷೇತ್ರ ಎಲ್ಲ ನವಗ್ರಾಮದ ಮನೆಗಳಿಗೆ ಕುಡಿಯುವ ನೀರು, ಸಮರ್ಪಕ ರಸ್ತೆ ಸೇರಿದಂತೆ ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಬದ್ಧವಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.

ಮಲಪ್ರಭಾ ನದಿ ಪ್ರವಾಹದಿಂದ ಪದೇ ಪದೇ ಹಾನಿ ಅನುಭವಿಸುವುದು ಬೇಡ. ಸರಕಾರ ನಿಮಗಾಗಿ ನಿರ್ಮಿಸಿರುವ ನವ ಗ್ರಾಮದಲ್ಲಿ ಹೋಗಿ ನೆಲೆಸಿರಿ. ಜಿಲ್ಲಾಡಳಿತ ನವ ಗ್ರಾಮದ ಮನೆಗಳ ಕಿಟಕಿ, ಬಾಗಿಲು ದುರಸ್ತಿ ಕಾರ್ಯಕ್ಕೆ ಯೋಜನೆ ಸಿದ್ಧ ಪಡಿಸಿದ್ದು ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದರು.

ತಾಪಂ ಇಒ ಸಂತೋಷ ಪಾಟೀಲ ಮಾತನಾಡಿ, 2008-09ರ ನೆರೆಹಾವಳಿಯಲ್ಲಿ ಮನೆ ಕಳೆದುಕೊಂಡವರಿಗೆ ಅಂದಿನ ಸರ್ಕಾರ ಆಸರೆ ಮನೆಗಳನ್ನು ನೀಡಿದೆ. ಆದರೆ ಹಕ್ಕುಪತ್ರ ನೀಡಿದ್ದಿಲ್ಲ. ಕಳೆದ ತಿಂಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಸಮಯದಲ್ಲಿ ಜಿಲ್ಲಾಧಿಕಾರಿಗಳು ಮಾತು ಕೊಟ್ಟಂತೆ ಹಕ್ಕುಪತ್ರ ನೀಡಿದ್ದಾರೆ ಎಂದರು.

Advertisement

ಪಿಕಾರ್ಡ್‌ ಬ್ಯಾಂಕ್‌ ಉಪಾಧ್ಯಕ್ಷ ನಿಂಗಪ್ಪ ಮಾತನಾಡಿ,ಯಾವುದೇ ಗದ್ದಲ, ಗಲಾಟೆ ಮಾಡದೆ ಸೌಜನ್ಯದಿಂದ ಬದುಕಬೇಕು. ಹಿಂದೆ ನಡೆದಿರುವ ಕಹಿ ಘಟನೆಗಳನ್ನು ಮರೆತು ಪರಸ್ಪರ ಪ್ರೀತಿ-ಸಹಬಾಳ್ವೆಯಿಂದ ಇರಬೇಕೆಂದರು. ತಾಲೂಕಾ ಪಂಚಾಯತ ಉಪಾಧ್ಯಕ್ಷೆ ಇಂದಿರಾ ತೇಲಿ, ರೋಣ ತಹಶೀಲ್ದಾರ್‌ ಜೆ.ಬಿ.ಜಕ್ಕನಗೌಡ್ರ, ಸದಸ್ಯ ರಾಮನಗೌಡ್ರ ಪಾಟೀಲ, ಗ್ರಾಮ ಪಂಚಾಯತ ಅಧ್ಯಕ್ಷ ಮಾದರ, ಪಿಡಿಒ ಬಸವರಾಜ ಗಿರಿತಮ್ಮನ್ನವರ, ಮುಖಂಡರಾದ ವೆಂಕಟೇಶ ಕುಲಕರ್ಣಿ, ಸಂಕಪ್ಪ ಸೂಳಿಕೇರಿ, ಸಿದ್ದಪ್ಪ ಸಾಸ್ವಿಹಾಳ, ಬಾಳಪ್ಪ ಖ್ಯಾಡದ, ಅಶೋಕ ಹೊಸಮನಿ, ಆರ್‌.ಸಿ. ಬಾರಕೇರ, ಎಸ್‌.ಎನ್‌. ಕನೋಜಿ, ಈರಣ್ಣ ಪತ್ತಾರ ಪೊಲೀಸ್‌ ಅಧಿಕಾರಿ ಪರಮೇಶ್ವರ ಕವಟಗಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next