ಕೈಕಂಬ: ಸರಕಾರದ ಅನುದಾನದಿಂದಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ರಸ್ತೆ ಸಹಿತ ಮೂಲಸೌಕರ್ಯಗಳನ್ನು ಒದಗಿಸ ಲಾಗುತ್ತಿದೆ. ಇನ್ನೂ ಜನರ ಜೀವನವನ್ನು ಉತ್ತಮಗೊಳಿಸಲು ಅವರಿಗೆ ಹಕ್ಕುಪತ್ರ, ಕೃಷಿ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಡಾ| ಭರತ್ ಶೆಟ್ಟಿ ವೈ. ಹೇಳಿದರು.
ಎಡಪದವು ಶ್ರೀರಾಮ ಮಂದಿರದ ಸಭಾಭವನದಲ್ಲಿ ಮಂಗಳವಾರ ಎಡಪದವು ಜಿ.ಪಂ. ಕ್ಷೇತ್ರ ವ್ಯಾಪ್ತಿಯ 94ಸಿಸಿ ಹಕ್ಕುಪತ್ರ ವಿತರಣೆ, ವಿಪತ್ತು ಪರಿಹಾರಧನ, ವಿವಿಧ ವೇತನ ಮಂಜೂರಾತಿ, ಅಲೆಮಾರಿ ಜನಾಂಗದವರಿಗೆ ನಿವೇಶನ ಮಂಜೂರಾತಿ ಪತ್ರ, ಕೃಷಿ ಯಂತ್ರೋಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು. ಹಕ್ಕುಪತ್ರ ವಿತರಣೆಯಿಂದ ಅವರ ಜೀವನಮಟ್ಟ ಸುಧಾರಿಸಲು ಸಾಧ್ಯವಾಗುತ್ತದೆ ಎಂದರು.
ಸಕ ಡಾ| ಭರತ್ ಶೆಟ್ಟಿ ಅವರು ಎಡಪದವು ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಎಡಪದವು, ಕುಪ್ಪೆಪದವು, ಮುತ್ತೂರು, ಮುಚ್ಚಾರು, ಪಡುಪೆರಾರ ಗ್ರಾ.ಪಂ. ವ್ಯಾಪ್ತಿಯ 92 ಮಂದಿಗೆ ಹಕ್ಕುಪತ್ರ, 20 ಮಂದಿ ಫಲಾನುಭವಿಗಳಿಗೆ ವಿವಿಧ ವೇತನ ಮಂಜೂರಾತಿ ಪತ್ರ, 18 ಪ್ರಾಕೃತಿಕ ವಿಕೋಪ ಪರಿಹಾರ ಚೆಕ್, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅಲೆಮಾರಿ ಜನಾಂಗದ 9ಮಂದಿಗೆ ನಿವೇಶನ ಮಂಜೂರಾತಿ ಅದೇಶ ಪತ್ರ, ಕೃಷಿ ಇಲಾಖೆಯ ವತಿಯಿಂದ 5 ಮಂದಿಗೆ ಪವರ್ ವಿಡರ್ ಹಾಗೂ ಒಂದು ಮಿನಿ ಟ್ರ್ಯಾಕ್ಟರ್‌ನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಡಾ| ಭರತ್ ಶೆಟ್ಟಿ ಅವರು ಮಿನಿ ಟ್ರ್ಯಾಕ್ಟರ್‌ನ ಬಗ್ಗೆ ಮಾಹಿತಿ ತಿಳಿದುಕೊಂಡು ಸ್ವತಃ ಚಲಾಯಿಸಿದರು. ಅನಂತರ ಟ್ರ್ಯಾಕ್ಟರ್‌ನ್ನು ಕೊಂಪದವು ರೈತ ರಾಜೇಂದ್ರ ಪಿಂಟೋ ಅವರಿಗೆ ವಿತರಿಸಿದರು.
ಜಿ.ಪಂ. ಸದಸ್ಯ ಜನಾರ್ದನ ಗೌಡ ಅವರು ಪ್ರಸ್ತಾವಿಸಿ, ಅಲೆಮಾರಿ ಜನಾಂಗಕ್ಕೆ ನಿವೇಶನ ನೀಡುವ ಕಾರ್ಯ ಪ್ರಥಮವಾಗಿ ಕ್ಷೇತ್ರದಲ್ಲಿ ಅಗಿದೆ. 20 ವರ್ಷಗಳಿಂದ ಸಿಗದ ಹಕ್ಕುಪತ್ರಗಳು ಈ ಬಾರಿ ಜನರಿಗೆ ಸಿಗುವಂತಾಗಿದೆ. 94ಸಿಸಿಯಲ್ಲಿ ಉಳಿಕೆಯ ಅದವರಿಗೂ ಹಕ್ಕುಪತ್ರ ನೀಡುವ ಕಾರ್ಯ ಮುಂದೆ ಆಗಲಿದೆ. ಕ್ಷೇತ್ರದಲ್ಲಿ ನಿವೇಶನ ಹಂಚುವ ಕಾರ್ಯ ವೇಗ ಪಡೆದಿದೆ ಎಂದು ಅವರು ಹೇಳಿದರು.
ತಹಶೀಲ್ದಾರ ಗುರುಪ್ರಸಾದ್, ಹಿಂದು ಳಿದ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿ ಸಚಿನ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಉಪಸ್ಥಿತರಿದ್ದರು. ಗುರುಪುರ ಹೋಬಳಿಯ ಉಪ ತಹಶೀಲ್ದಾರ ಶಿವಪ್ರಸಾದ್ ಸ್ವಾಗತಿಸಿದರು. ಕುಶಾಲ ನಿರೂಪಿಸಿದರು. ಎಡಪದವು ಗ್ರಾ.ಪಂ. ಲೆಕ್ಕ ಪರಿಶೋಧಕ ಇಸ್ಮಾಯಿಲ್ ವಂದಿಸಿದರು.
ಜವಾಬ್ದಾರಿ ನಿರ್ವಹಿಸಿದ್ದೇನೆ
ಯಾವುದೇ ಅಭಿವೃದ್ಧಿ ಕಾರ್ಯಗಳು ಬಂದಾಗ ರಾಜಕೀ ಯವನ್ನು ಬದಿಗಿಟ್ಟು, ಪ್ರಜೆಗಳ ಕಷ್ಟ, ಆಕಾಂಕ್ಷೆಗಳಿಗೆ ಸ್ಪಂದಿ ಸುವ ಜವಾಬ್ದಾರಿಯನ್ನು ಅದಷ್ಟು ನಿರ್ವಹಿಸಿದ್ದೇನೆ ಎಂದು ಶಾಸಕ ಡಾ| ಭರತ್ ಶೆಟ್ಟಿ ಹೇಳಿದರು.