Advertisement
ಉತ್ತರ ಪ್ರದೇಶದ 46 ವರ್ಷದ ಮೈರಾಜ್ ಖಾನ್ 37 ಅಂಕಗಳ ಸಾಧನೆಯೊಂದಿಗೆ ಚಿನ್ನಕ್ಕೆ ಗುರಿ ಇರಿಸಿದರು. ಕೊರಿಯಾದ ಮಿನ್ಸು ಕಿಮ್ (36 ಅಂಕ) ಅವರನ್ನು ಒಂದೇ ಅಂಕದ ಅಂತರದಲ್ಲಿ ಹಿಮ್ಮೆಟ್ಟಿಸಿದರು. ಕಂಚಿನ ಪದಕ ಬ್ರಿಟನ್‌ನ ಬೆನ್ ಲೆವ್ಲಿನ್ (26 ಅಂಕ) ಪಾಲಾಯಿತು. ಎರಡು ಬಾರಿಯ ಒಲಿಂಪಿಯನ್ ಆಗಿರುವ ಮೈರಾಜ್ ಖಾನ್ 2016ರ ರಿಯೋ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕದೊಂದಿಗೆ ಮಿಂಚಿದ್ದರು.
ದಿನದ ಇನ್ನೊಂದು ಸ್ಪರ್ಧೆಯಲ್ಲಿ ಅಂಜುಮ್ ಮೌದ್ಗಿಲ್, ಆಶಿ ಚೌಕ್ಸೆ ಮತ್ತು ಸಿಫ್ಟ್ ಕೌರ್ ಸಮ್ರಾ ಅವರನ್ನೊಳಗೊಂಡ ವನಿತಾ ತಂಡ 50 ಮೀ. ರೈಫಲ್ 3 ಪೊಸಿಶನ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿತು. ಭಾರತ ಒಟ್ಟು 13 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ (5 ಚಿನ್ನ, 5 ಬೆಳ್ಳಿ, 3 ಕಂಚು).