Advertisement

ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವ ಚಾಂಪಿಯನ್‌ಶಿಪ್‌: ಭಾರತಕ್ಕೆ 10 ಗೋಲ್ಡ್‌

10:55 PM Oct 08, 2021 | Team Udayavani |

ಲಿಮಾ (ಪೆರು): ಐಎಸ್‌ಎಸ್‌ಎಫ್ ಜೂನಿಯರ್‌ ಶೂಟಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ 10ನೇ ಬಂಗಾರ ಗೆದ್ದು ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಶುಕ್ರವಾರ 25 ಮೀ. ರ್ಯಾಪಿಡ್‌ ಫೈರ್‌ ಪಿಸ್ತೂಲ್‌ ಮಿಕ್ಸೆಡ್‌ ತಂಡ ಸ್ಪರ್ಧೆಯಲ್ಲಿ ರಿದಮ್‌ ಸಂಗ್ವಾನ್‌-ವಿಜಯವೀರ್‌ ಸಿಧು ಚಿನ್ನಕ್ಕೆ ಗುರಿ ಇರಿಸಿದರು.

Advertisement

ಸಂಗ್ವಾನ್‌-ಸಿಧು ಫೈನಲ್‌ನಲ್ಲಿ ಥಾಯ್ಲೆಂಡ್‌ನ‌ ಕನ್ಯಕೋರ್ನ್ ಹಿರುಂ ಫೊಯೆಮ್‌-ಶ್ವಕೋನ್‌ ಟ್ರಿನಿಫ‌ಕ್ರೋನ್‌ ವಿರುದ್ಧ 9-1 ಅಂತರದ ಮೇಲುಗೈ ಸಾಧಿಸಿದರು. ಈ ಸ್ಪರ್ಧೆಯ ಕಂಚಿನ ಪದಕ ಕೂಡ ಭಾರತದ ಪಾಲಾಯಿತು. ತೇಜಸ್ವಿನಿ-ಅನೀಷ್‌ ತೃತೀಯ ಸ್ಥಾನಿಯಾದರು. ಇವರು ಥಾಯ್ಲೆಂಡ್‌ನ‌ ಮತ್ತೂಂದು ಜೋಡಿ ಚವಿಸಾ ಪದುಕ-ರಾಮ್‌ ಖಮೆಂಗ್‌ ವಿರುದ್ಧ ಮೇಲುಗೈ ಸಾಧಿಸಿದರು.

ವನಿತೆಯರ 50 ಮೀ. ರೈಫ‌ಲ್‌ 3 ಪೊಸಿಶನ್‌ನಲ್ಲಿ ಪ್ರಸಿದ್ಧಿ ಮಹಂತ್‌, ನಿಶ್ಚಲ್‌ ಮತ್ತು ಆಯುಷಿ ಪೋದ್ದರ್‌ ತಂಡಕ್ಕೆ ಬೆಳ್ಳಿ ಪದಕ ಒಲಿಯಿತು. ಫೈನಲ್‌ನಲ್ಲಿ ಇವರು ಅಮೆರಿಕನ್‌ ತಂಡಕ್ಕೆ 43-47 ಅಂತರದಿಂದ ಶರಣಾದರು.

ಇದನ್ನೂ ಓದಿ:ನಿಗದಿತ ಅವಧಿಗೇ ಶಬರಿಮಲೆ ಏರ್‌ಪೋರ್ಟ್‌ ಪೂರ್ಣ: ಕೇರಳ ಸಿಎಂ

ಭಾರತದ ಖಾತೆಯಲ್ಲೀಗ 10 ಚಿನ್ನ, 9 ಬೆಳ್ಳಿ ಹಾಗೂ 4 ಕಂಚಿನ ಪದಕಗಳಿವೆ. ಅಮೆರಿಕ 6 ಚಿನ್ನ, 8 ಬೆಳ್ಳಿ, 6 ಕಂಚು ಗೆದ್ದು ದ್ವಿತೀಯ ಸ್ಥಾನದಲ್ಲಿ ಮುಂದುವರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next