Advertisement

Chandrayaan-3: ವಿಶ್ವದ ಮಾನವತೆಗೆ ಇಸ್ರೋ ಸಾಧನೆ ಸಹಕಾರಿ: ಭಾಗವತ್‌

10:25 PM Aug 24, 2023 | Team Udayavani |

ಬೆಂಗಳೂರು: ಇಲ್ಲಿಯವರೆಗೆ ಯಾರೂ ಇಳಿಯದ ಚಂದ್ರನ ದಕ್ಷಿಣ ಧ್ರುವದಲ್ಲಿ ನಾವು ಕಾಲಿಡುವ ಮೂಲಕ ನಮ್ಮ ವಿಜ್ಞಾನಿಗಳ ಸುದೀರ್ಘ‌ ಕಠಿನ ಪರಿಶ್ರಮ ಫ‌ಲ ಕೊಟ್ಟಿದೆ. ಸಂಪೂರ್ಣ ದೇಶಕ್ಕಾಗಿ ಮಾತ್ರವಲ್ಲದೆ, ವಿಶ್ವದ ಮಾನವತೆಗಾಗಿ ಈ ಸಾಧನೆ ಸಹಕಾರಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ| ಮೋಹನ್‌ ಭಾಗವತ್‌ ಹೇಳಿದರು.

Advertisement

ಇಸ್ರೋ ಉಡಾವಣೆಗೊಳಿಸಿದ ಭಾರತದ ಹೆಮ್ಮೆಯ ಚಂದ್ರಯಾನ-3 ಯೋಜನೆಯ ಯಶಸ್ಸಿನ ಬಳಿಕ ಮಾತನಾಡಿದ ಅವರು, “ವಸುಧೈವ ಕುಟುಂಬಕಂ’ ಎಂಬ ತನ್ನ ಸ್ನೇಹಯುತ ದೃಷ್ಟಿಯೊಂದಿಗೆ ಭಾರತ ಇಂದು ಇಡೀ ವಿಶ್ವಕ್ಕೆ ಶಾಂತಿ ಹಾಗೂ ಸಮೃದ್ಧಿಯನ್ನು ಪ್ರದಾನ ಮಾಡುವ ಕಾರ್ಯದ ನೇತೃತ್ವವನ್ನು ವಹಿಸಿದೆ. ಅದರ ಪ್ರತೀಕವಾಗಿ ಇಂದು ನಾವೆಲ್ಲರೂ ಆನಂದದಿಂದ ಸಂಭ್ರಮಿಸುತ್ತಿರುವ ಈ ಕ್ಷಣ ಸಾಧ್ಯವಾಗಿದೆ. ನಮ್ಮ ವಿಜ್ಞಾನಿಗಳು ನಮೆಲ್ಲರಿಗೂ ಧನ್ಯತೆಯ ಭಾವವನ್ನು ಒದಗಿಸಿ¨ªಾರೆ. ಅದಕ್ಕಾಗಿ ನಾವು ಅವರಿಗೆ ಕೃತಜ್ಞರು. ವಿಜ್ಞಾನಿಗಳನ್ನು ಪ್ರೋತ್ಸಾಹಿಸಿದ ಸರಕಾರಕ್ಕೂ ಧನ್ಯವಾದಗಳು ಎಂದರು.

ಭಾರತ ಬೆಳೆಯುವ ಜತೆಗೆ ಜಗತ್ತನ್ನು ಬೆಳೆಸುತ್ತಿದೆ ಹಾಗೂ ಭಾರತ ಭೌತಿಕ ಮತ್ತು ಆಧ್ಯಾತ್ಮಿಕವಾದ ಪ್ರಗತಿಯ ಆಧಾರದ ಮೇಲೆ ವಿಶ್ವವನ್ನು ಮುನ್ನಡೆಸಲಿದೆ ಎಂಬ ಮಾತು ಈಗ ಸತ್ಯವಾಗುತ್ತಿದೆ. ಜ್ಞಾನ ಮತ್ತು ವಿಜ್ಞಾನದ ಕ್ಷೇತ್ರದಲ್ಲಿ ನಾವು ಪ್ರಗತಿ ಸಾಧಿಸೋಣ. ನೀಲಾಕಾಶದ ರೂಪಕ್ಕೆ ಹೊಸ ಭಾಷ್ಯ ಬರೆಯಲು ಮುಂದಾಗೋಣ. ಭೋಗದ ವಾತಾವರಣದಲ್ಲಿ ತ್ಯಾಗದ ಸಂದೇಶವನ್ನು ನೀಡೋಣ. ದಾಸ್ಯದ ಘನವಾದ ಮೋಡಗಳಿಂದ ಸುಖದ ವರ್ಷಧಾರೆಯಾಗುವಂತೆ ಮಾಡೋಣ – ಈ ಉದ್ದೇಶವನ್ನು ಸಾಕಾರಗೊಳಿಸಲು ಈಗ ಇಡೀ ರಾಷ್ಟ್ರಕ್ಕೆ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next