Advertisement

ಬಾಹ್ಯಾಕಾಶ ಸಂಶೋಧನೆ ಎನ್‌ಐಟಿಕೆ -ಇಸ್ರೋ ಒಪ್ಪಂದ

11:21 PM Jan 02, 2020 | mahesh |

ಸುರತ್ಕಲ್‌: ಸ್ಪೇಸ್‌ ಟೆಕ್ನಾಲಜಿ ಅಪ್ಲಿಕೇಶನ್‌ ಕ್ಷೇತ್ರದಲ್ಲಿ ಜಂಟಿಯಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕಾಗಿ ಇಲ್ಲಿನ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎನ್‌ಐಟಿಕೆ) ಮತ್ತು ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ನಿರ್ಧರಿಸಿವೆ. ಈ ಸಂಬಂಧ ಜ. 3ರಂದು ಇಸ್ರೋ ಸಿಬಿಪಿಒ ವಿಭಾಗದ ನಿರ್ದೇಶಕ ಪಿ. ವೆಂಕಟಕೃಷ್ಣನ್‌ ಮತ್ತು ಎನ್‌ಐಟಿಕೆ ನಿರ್ದೇಶಕ ಪ್ರೊ| ಉಮಾಮಹೇಶ್ವರ ರಾವ್‌ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಇದರ ಅಂಗವಾಗಿ ಇಸ್ರೋ ಸಂಸ್ಥೆಯು ಎನ್‌ಐಟಿಕೆಯಲ್ಲಿ ರೀಜನಲ್‌ ಅಕಾಡೆಮಿಕ್‌ ಸೆಂಟರ್‌ ಫಾರ್‌ ಸ್ಪೇಸ್‌ (ಆರ್‌ಎಸಿ-ಎಸ್‌) ಸ್ಥಾಪಿಸಲಿದೆ. ಸ್ಥಳೀಯ ಅಧ್ಯಯನ ಕೇಂದ್ರ ಸ್ಥಾಪನೆ ಜತೆಗೆ ಭವಿಷ್ಯದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಉನ್ನತ ತಂತ್ರಜ್ಞಾನ, ಸಂಶೋಧನೆಗೆ ಮುಂದಾಗುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆ ಇರಿಸಲಾಗಿದೆ.

Advertisement

ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಪುದುಚೇರಿ, ಲಕ್ಷದ್ವೀಪ ರಾಜ್ಯಗಳನ್ನೊಳಗೊಂಡಂತೆ ಈ ಕೇಂದ್ರ ಸಂಶೋಧನೆ, ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ಪೂರಕವಾಗಿ ಇಸ್ರೋ 2 ಕೋಟಿ ರೂ. ಅನುದಾನ ಒದಗಿಸಲಿದೆ ಮಾತ್ರವಲ್ಲದೆ ಸಂಸ್ಥೆಯ ವಿಜ್ಞಾನಿಗಳು ಎನ್‌ಐಟಿಕೆ ಮತ್ತು ಪಾಲುದಾರ ಶಿಕ್ಷಣ ಸಂಸ್ಥೆಗಳಿಗೆ ಆಗಮಿಸಿ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಮತ್ತು ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸುವ ಉದ್ದೇಶವನ್ನು ಈ ಒಪ್ಪಂದ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next