Advertisement

ISRO 2035ರಲ್ಲಿ ಬಾಹ್ಯಾಕಾಶ ನಿಲ್ದಾಣ ಖಚಿತ: ವೀರಮುತ್ತುವೇಲ್‌

12:32 AM Feb 11, 2024 | Team Udayavani |

ಊಟಿ: 2035ರ ಒಳಗಾಗಿ ಬಾಹ್ಯಾಕಾಶ ನಿಲ್ದಾಣ ನಿರ್ಮಾಣದ ಯೋಜನೆ ಪ್ರಗತಿಯಲ್ಲಿದೆ ಎಂದು ಇಸ್ರೋದ ಚಂದ್ರಯಾನ-3 ಮಿಷನ್‌ನ ನಿರ್ದೇಶಕ ಪಿ ವೀರಮುತ್ತುವೇಲ್‌ ಹೇಳಿದ್ದಾರೆ.

Advertisement

ಊಟಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದರ ಜತೆಗೆ 2040ರ ವೇಳೆಗೆ ಚಂದ್ರನಲ್ಲಿಗೆ ಮಾನವ ಸಹಿತ ಗಗನಯಾತ್ರೆ ಕೈಗೊಳ್ಳುವುದಕ್ಕೆ ಸಂಬಂಧಿಸಿದ ಯೋಜನೆಯೂ ಕಾರ್ಯಗತವಾಗಲಿದೆ. ಅದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳೂ ನಿರಾತಂಕವಾಗಿ ನಿಗದಿಯಾಗಿರುವಂತೆಯೇ ಮುಂದುವರಿದಿದೆ ಎಂದರು. 2040ರ ವೇಳೆ ಚಂದ್ರನಲ್ಲಿಗೆ ಮಾನವ ಸಹಿತ ಗಗನಯಾನ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೋ ಅಧ್ಯಕ್ಷರು ಈಗಾಗಲೇ ಘೋಷಣೆ ಮಾಡಿದ್ದಾರೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next