Advertisement

ಜಿಸ್ಯಾಟ್‌-6ಎ ಉಪಗ್ರಹ ಯಶಸ್ವಿ ಉಡಾವಣೆ

09:50 AM Mar 30, 2018 | Karthik A |

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಗುರುವಾರ ಜಿಸ್ಯಾಟ್‌ 6ಎ ಸಂವಹನ ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೇರಿಸಿದೆ. ಇದೇ ವೇಳೆ ಉಡಾವಣಾ ವಾಹನ ಜಿಎಸ್‌ಎಲ್‌ವಿ ಎಂಕೆ 2 ನಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಈ ಸುಧಾರಣೆಗಳನ್ನು ಮುಂದಿನ ಉಡಾವಣೆಗಳಲ್ಲಿ ಬಳಸಿಕೊಳ್ಳಲು ಇಸ್ರೋ ನಿರ್ಧರಿಸಿದೆ.

Advertisement

2 ಟನ್‌ ಸಾಮರ್ಥ್ಯದ ಜಿಸ್ಯಾಟ್‌ 6ಎ ಉಪಗ್ರಹವನ್ನು ಸಂಜೆ 4.56 ಕ್ಕೆ ಉಡಾವಣೆ ಮಾಡಲಾಗಿದೆ. 17 ನಿಮಿಷಗಳಲ್ಲಿ ಉಪಗ್ರಹ ಕಕ್ಷೆ ತಲುಪಿದೆ ಎಂದು ಇಸ್ರೋ ಹೇಳಿದೆ. ಮುಂದಿನ ಕೆಲವು ದಿನಗಳಲ್ಲಿ ಇದು ನಿಗದಿತ ಕಕ್ಷೆಯಲ್ಲಿ ಪರಿಭ್ರಮಿಸಲಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ. ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿರುವ ಕೆ.ಶಿವನ್‌ಗೆ ಇದು ಮೊದಲ ಯೋಜನೆಯಾಗಿದೆ. ವಿಜ್ಞಾನಿಗಳ ಸಾಧನೆಯನ್ನು ಪ್ರಧಾನಿ ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next